Ticker

6/recent/ticker-posts

Ad Code

ಬಿಜೆಪಿಯ ಭರವಸೆಯ ಕ್ಷೇತ್ರವೆಂದು ಬಿಂಬಿತ ಮಂಜೇಶ್ವರದಲ್ಲಿ ಪಕ್ಷದೊಳಗಿನ ಆಂತರಿಕ ಕಲಹ ಬಹಿರಂಗ : ಕಾರ್ಯಕರ್ತರಿಗೆ ನಿರಾಸೆ

 

ಮಂಜೇಶ್ವರ : ಕೇರಳ  ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭರವಸೆಯ ಕ್ಷೇತ್ರವೆಂದೆ ಗುರುತಿಸಲ್ಪಟ್ಟಿರುವ ಮಂಜೇಶ್ವರ ಮಂಡಲದ ಬಿಜೆಪಿ ಪಕ್ಷದೊಳಗಿನ‌ ಆಂತರಿಕ ಕಲಹ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ಥಳೀಯಾಡಳಿತ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ‌ ಬಗ್ಗೆ ಬಿಜೆಪಿ ರಾಜ್ಯ ಸಮಿತಿ  ಅವಲೋಕನ ಸಭೆ ನಡೆಸಿತ್ತು. ಇದರ ಮರುದಿನ ಜಿಲ್ಲೆಯ ಟಿವಿ ವಾಹಿನಿಯೊಂದರ ವರದಿಗಾರರು ವಿಧಾನಸಭಾ ಅಭ್ಯರ್ಥಿ ನಿರ್ಣಯದ ಬಗ್ಗೆ ಕೇಳಿದ ಪ್ರಶ್ನೆಗೆ ಮಂಜೇಶ್ವರದ ಜನ ನಾಯಕ, ಪ್ರಸ್ತುತ ಬಿಜೆಪಿ ಕೋಝಿಕ್ಕೋಡ್ ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಬಳಿಕ ಪಕ್ಷದೊಳಗೆ ಹೊಗೆಯಾಡುತ್ತಿದ್ಧ ಆಂತರಿಕ ಭಿನ್ನತೆ ಬಹಿರಂಗಗೊಂಡಿದೆ ಎನ್ನಲಾಗುತ್ತಿದೆ. ಇದಾದ ಬೆರಳೆಣಿಕೆಯ ದಿನದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಕಾಸರಗೋಡು, ಮಂಜೇಶ್ವರಕ್ಕೆ  ರಾಜ್ಯ ಸಮಿತಿಯ ಎ ಕ್ಲಾಸ್ ಸದಸ್ಯರು ಅಭ್ಯರ್ಥಿಗಳಾಗಿ ಬರಬೇಕೆಂದು ಆಗ್ರಹಿಸಿದ್ದರು. ಈ ಹಿಂದಿನಿಂದಲೂ ಮದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕೊನೆಯ ಕ್ಷಣ ಸೋಲಿನ ರುಚಿ ಉಣ್ಣುವ ಇಲ್ಲಿನ ಕಾರ್ಯಕರ್ತರು ಈ ಬಾರಿ ಇದೇ ಮಂಡಲದ ಜನಪ್ರಿಯ ಅಭ್ಯರ್ಥಿ ಕಣದಲ್ಲಿರಬೇಕೆಂದು ಆಗ್ರಹಿಸುತ್ತಿರುವ ನಡುವೆ ಪಕ್ಷದ ಕಾರ್ಯಕರ್ತರಿಗೆ ನಿರಾಸೆ ತರುವ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಈ ನಡುವೆ  ಟಿವಿ ವಾಹಿನಿಗೆ ಹೇಳಿಕೆ ನೀಡಿದ ವಿಜಯ ಕುಮಾರ್ ರೈ ಅವರನ್ನು ಪಕ್ಷದ ಕಾರ್ಯಕ್ರಮಗಳಿಂದ ಹೊರಗಿಡಬೇಕೆಂದು ಆಗ್ರಹಿಸಿ ಜಿಲ್ಲಾಧ್ಯಕ್ಷೆ ರಾಜ್ಯ ಸಮಿತಿಗೆ ವರದಿ ಸಲ್ಲಿಸಿದ್ದು ಇದರಂತೆ ವಿಜಯಕುಮಾರ್ ರೈ ವಿರುದ್ದ ಆರೋಪಗಳೊಂದಿಗೆ ಪಕ್ಷದ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ವಿಜಯ ಕುಮಾರ್ ರೈ  ಅವರು ಪ್ರತಿಕ್ರಿಯಿಸಿದ್ದು ಮಾಧ್ಯಮ ವರದಿಗಾರರು ಕೇಳಿದ ಪ್ರಶ್ನೆಗೆ ತಾನು ಎಲ್ಲಿಯೂ ಜಿಲ್ಲಾಧ್ಯಕ್ಷೆಯನ್ನು ಎತ್ತಿ ಕಟ್ಟುವ ಮಾತು ಆಡದಿದ್ದು ಮಂಜೇಶ್ವರದ ಅಭ್ಯರ್ಥಿ ನಿರ್ಣಯ ಅಗಿಲ್ಲವೆಂದಷ್ಟೆ ಮಾಧ್ಯಮಗಾರರಿಗೆ ಸ್ಪಷ್ಟಪಡಿಸಿರುವುದಾಗಿ ಹೇಳಿದ್ದಾರೆ. ಈ ಕ್ರಮದ ಬಳಿಕ ಇದೀಗ ಪಕ್ಷದ ಕಾರ್ಯಕರ್ತರು ಇಂದು ಹಾಗೂ ಮುಂದೆ ಮಂಜೇಶ್ವರ ಮಂಡಲದಲ್ಲಿ ನಿಗದಿತವಾಗಿ ನಡೆಯ ಬೇಕಿದ್ದ ಅವಲೋಕನ ಸಭೆಗಳನ್ನು ಏಕಾಏಕಿ ಮುಂದೂಡುವ ಪ್ರಕ್ರಿಯೆ ಕಂಡು ಬರುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ  ಭರವಸೆ ಮೂಡಿಸಿ ಕಾರ್ಯಕರ್ತರಿಗೆ‌ ಹಾಗೂ ಬಿಜೆಪಿ ಬೆಂಬಲಿಗರಿಗೆ ಉತ್ಸಾಹ ತುಂಬಿದ್ದ ಮಂಜೇಶ್ವರ ಮಂಡಲದ ಅಭ್ಯರ್ಥಿ ಆಯ್ಕೆಯ ಆರಂಭದಲ್ಲಿಯೇ ಉಂಟಾದ ಆಂತರಿಕ ಕಲಹ ಉಳಿದ ಪಕ್ಷಗಳಾದ ಐಕ್ಯರಂಗ ಹಾಗೂ ಎಡರಂಗಕ್ಕೆ ವರದಾನವಾಗಲಿದೆ ಎಂಬುದು ಚುನಾವಣಾ ನಿರೀಕ್ಷಕರ ಅಭಿಪ್ರಾಯವಾಗಿದೆ.

Post a Comment

0 Comments