ಕಾಂಞಂಗಾಡ್ : ಕ್ಯಾoಪ್ಕೋ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಕಾಞಂಗಾಡ್ ಶಾಖೆಯ ಸಕ್ರಿಯ ಸದಸ್ಯರಾದ ಶ್ರೀ ಗೋವಿಂದನ್ ಎಂ.ಸಿ. ಪರಕಲ್ಲುರವರ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ಕ್ಯಾoಪ್ಕೋ ಸಹಾಯಧನದ ಮೊತ್ತ 19,043ರೂ.ನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀ ರಾಧಾಕೃಷ್ಣ ಕೆ ಇವರು ಕ್ಯಾoಪ್ಕೋ ಪರಪ್ಪ ಶಾಖೆಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಬದಿಯಡ್ಕ ಪ್ರಾಂತದ ಮಾರುಕಟ್ಟೆ ವಿಭಾಗದ ಚೀಫ್ ಮ್ಯಾನೇಜರ್ ಶ್ರೀ ಚಂದ್ರ ಎಂ, ಪರಪ್ಪ, ಶಾಖೆಯ ಪ್ರಬಂಧಕ ಶ್ರೀ ಜನಾರ್ಧನನ್ ನಾಯರ್, ಕಾಂಞಂಗಾಡ್ ಶಾಖೆಯ ಪ್ರಬಂಧಕ ಹರಿಪ್ರಸಾದ್ ಮತ್ತು ಪರಪ್ಪ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

0 Comments