ಮುಳ್ಳೇರಿಯ: ರಸ್ತೆಗೆ ಅಡ್ಡಲಾಗಿ ಹಾರಿದ ಕಾಡುಪ್ರಾಣಿಯೊಂದು ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದು ಸತ್ತ ಪ್ರಾಣಿ ಚಿರತೆ ಮರಿಯನ್ನು ಹೋಲುತ್ತಿರುವುದರಿಂದ ಸ್ಥಳೀಯರಲ್ಲಿ ಭೀತಿಗೆ ಕಾರಣವಾಗಿದೆ. ಚೆರ್ಕಳ-ಜಾಲ್ಸೂರು ರಸ್ತೆಯ ಅದೂರು ಅಲಂತಡ್ಕದಲ್ಲಿ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಚಿರತೆಯಂತಹ ಪ್ರಾಣಿಯೊಂದು ರಸ್ತೆಯಲ್ಲಿ ಪತ್ತೆಯಾಗಿತ್ತು. ಸತ್ತ ಪ್ರಾಣಿ ಚಿರತೆಯಾಗಿದ್ದು, ಜನರು ಜಾಗರೂಕರಾಗಿರಬೇಕು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಕಾಡುಪ್ರಾಣಿ ಚಿರತೆ ಅಲ್ಲ ಬದಲಾಗಿ ಅದೇ ರೀತಿಯ ಹೋಲಿಕೆ ಇರುವ ಕಾಡುಪ್ರಾಣಿ ಎಂದು ಸ್ಥಳಕ್ಕೆ ಭೇಟಿ ನೀಡಿದ ಕಾರಡ್ಕ ವಲಯ ಅರಣ್ಯಾಧಿಕಾರಿ ಕೆ.ಎ.ಬಾಬು ತಿಳಿಸಿದ್ದಾರೆ.

0 Comments