ಕಳತ್ತೂರು: ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರಿನಲ್ಲಿ 'ಹೊಂಗಿರಣ' ದ್ವಿದಿನ ಸಹವಾಸ ಶಿಬಿರವು ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬಳೆ ಗ್ರಾಮ ಪಂಚಾಯತ್ ಸದಸ್ಯರಾದ ಸುಕೇಶ್ ಭಂಡಾರಿಯವರು ನೆರವೇರಿಸಿದರು. ಪಿಟಿಎ ಅಧ್ಯಕ್ಷರಾದ ವಸಂತ ಚೂರಿತಡ್ಕರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಗಣೇಶ್ ರಾವ್, ಎಂಪಿಟಿಎ ಅಧ್ಯಕ್ಷೆ ಸುಧಾ ಟೀಚರ್, ಉಪಾಧ್ಯಕ್ಷರಾದ ಸುರೇಶ್ ಕೆಮ್ಮಣ್ಣು, ಶಶಿಕಲಾ, ಶಾಲಾ ಹಿರಿಯ ಶಿಕ್ಷಕಿ ಭಾರತಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಆಚಾರ್ಯ ಸ್ವಾಗತಿಸಿ, ಶಿಕ್ಷಕ ಪುಷ್ಪರಾಜ್ ಶೆಟ್ಟಿ ವಂದಿಸಿದರು. ಉಮೇಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಆಟ ಪಾಠಗಳಲ್ಲಿ ಗಣಿತ, ಜಾನಪದ ಆಚರಣೆಗಳು, ಥಿಯೇಟರ್ ಗೇಮ್, ಕಡಲ ಕಿನಾರೆಗೆ ಪಯಣ, ಶಿಬಿರಾಗ್ನಿ, ಪಕ್ಷಿ ವೀಕ್ಷಣೆ, ಯೋಗ, ವ್ಯಾಯಾಮ, ರಂಗ ಕಲೆ ಮೊದಲಾದ ವಿಷಯಗಳಲ್ಲಿ ವಿವಿಧ ಚಟುವಟಿಕೆಗಳು ಜರುಗಿದವು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ರಾಜೇಶ್ ಮಾಸ್ತರ್, ಬಟ್ಟು ಮೂಲ್ಯ ಪುಣಿಯೂರು, ಗೋಪಾಲಕೃಷ್ಣ ಭಟ್, ರಾಜು ಕಿದೂರು, ರಂಗಕರ್ಮಿಗಳಾದ ಪ್ರಸಾದ್ ಮುಗು, ಅಶೋಕ್ ಕೊಡ್ಲಮೊಗರು ಭಾಗವಹಿಸಿದರು.
ಶಾಲಾ ಶಿಕ್ಷಕರಾದ ಸುಧಾಕರ, ಮೋಹನ್ ಚಂದ್ರ, ಮಂಜುನಾಥ್, ಅಶ್ವಥ, ಶೃತಿ, ಅರ್ಪಿತಾ, ವಿದ್ಯಾಶಂಕರಿ, ಸ್ವರ್ಣಶ್ರೀ, ಸುಕೇಶಿನಿ, ಸುಜಾತ, ಮುರಳೀಧರ, ಕೃಷ್ಣ ಪ್ರಸಾದ್ ಮೊದಲಾದವರು ಸಹಕರಿಸಿದರು.

.jpeg)
0 Comments