Ticker

6/recent/ticker-posts

Ad Code

ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಗೆ ಮಹಿಳಾ ಸದಸ್ಯರ ಆಯ್ಕೆ


ಕಾಸರಗೋಡು :  ಜಿಲ್ಲಾ ಪಂಚಾಯತ್‌ನ ವಿವಿಧ ಸ್ಥಾಯಿ ಸಮಿತಿಗಳಿಗೆ ಮಹಿಳಾ ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ನಾಲ್ಕು ಪ್ರಮುಖ ಸ್ಥಾಯಿ ಸಮಿತಿಗಳಿಗೆ ಮಹಿಳಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದ್ದರೂ, ಹಣಕಾಸು ಸ್ಥಾಯಿ ಸಮಿತಿಯ ಚುನಾವಣೆಯನ್ನು ಮಾತ್ರ ಜನವರಿ ಎಂಟಕ್ಕೆ   ಮುಂದೂಡಲಾಗಿದೆ. ಜಿಲ್ಲಾ ಪಂ.ಗೆ 10 ನೇ ಡಿವಿಶನ್ ನ  ಚೆರುವತ್ತೂರಿನಿಂದ ಚುನಾಯಿತರಾಗಿದ್ದ ಡಾ. ಸೆರೆನಾ ಸಲಾಂ ಅವರನ್ನು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು. ಅಭಿವೃದ್ಧಿ  ಸ್ಥಾಯಿ ಸಮಿತಿಗೆ ಬೇಕಲ ಡಿವಿಶನ್ ನಿಂದ ಪ್ರತಿನಿಧಿಸಿದ  ಟಿ.ವಿ.ರಾಧಿಕಾ ಅವರನ್ನು ನೇಮಿಸಲಾಯಿತು. ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿಗೆ ಕಲ್ಲಾರ್ ಡಿವಿಜನ್ ನಿಂದ ಚುನಾಯಿತರಾದ ರೀನಾ ಥಾಮಸ್ ಹಾಗೂ  ಲೋಕೋಪಯೋಗಿ ಸ್ಥಾಯಿ ಸಮಿತಿಗೆ ದೇಲಂಪಾಡಿ ಡಿವಿಶನ್ ನಿಂದ  ಓ.ವತ್ಸಲಾ ಆಯ್ಕೆಯಾದರು.

Post a Comment

0 Comments