ಕಾಸರಗೋಡು : ಜನಪ್ರಿಯವಾದ ಬೇಕಲ್ ಫೆಸ್ಟ್ ನಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ಆಯೋಜಿಸಿದ್ದ ಮಿನಿ ಸರಸ್ ಮೇಳ 12 ದಿನಗಳಲ್ಲಿ 34.38 ಲಕ್ಷ ರೂಗಳ ದಾಖಲೆ ವಹಿವಾಟು ನಡೆಸಿದ್ದು, ಸರ್ವತ್ರ ಪ್ರಶಂಸನೆಗೆ ಪಾತ್ರವಾಗಿದೆ. ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಮಾದರಿಯಾದ ಕುಟುಂಬಶ್ರೀ ಮಿಷನ್ ಈ ಬಾರಿ ಉತ್ತರಾಖಂಡ, ರಾಜಸ್ಥಾನ ಮತ್ತು ಆಂಧ್ರಪ್ರದೇಶ ರಾಜ್ಯಗಳು ಸೇರಿದಂತೆ ಜಿಲ್ಲೆಯ ಒಳಗೆ ಮತ್ತು ಹೊರಗಿನ ಅನೇಕ ಘಟಕಗಳನ್ನು ಮೇಳದಲ್ಲಿ ಪಾಲ್ಗೊಳ್ಳಿಸಲಾಗಿತ್ತು. ಜಿಲ್ಲೆಯ ಸುಮಾರು ಆರು ಸಾವಿರ ಕಿರು ಉದ್ಯಮ ಮಳಿಗೆಗಳು ಸೇರಿದಂತೆ ಕರಕುಶಲ ವಸ್ತುಗಳು, ಕಲಾ ಪ್ರಕಾರಗಳು, ಆಭರಣಗಳು, ಜವಳಿ, ಪಾತ್ರೆಗಳು ಇತ್ಯಾದಿಗಳು ಈ ಬಾರಿಯ ಮಿನಿ ಸರಸ್ ಮೇಳದಲ್ಲಿ ಪ್ರಮುಖವಾಗಿ ಗಮನ ಸೆಳೆದಿದೆ.

0 Comments