Ticker

6/recent/ticker-posts

Ad Code

ಬಸ್ ನಿಲ್ಲಿಸದ ಕಾರಣ ಕಲ್ಲೆಸೆದ ಆರೋಪಿ ಪೋಲಿಸ್ ತನಿಖೆಯ ಬಳಿಕ ಮನನೊಂದು ಆತ್ಮಹತ್ಯೆ


ಮಂಜೇಶ್ವರ : ತಲಪಾಡಿಯಲ್ಲಿ ಕೇರಳ ಸಾರಿಗೆ ಬಸ್ಸಿಗೆ ಕಲ್ಲೆಸೆದ ಪ್ರಕರಣದ ಆರೋಪಿ ಪೋಲಿಸ್ ತನಿಖೆಯ ಬಳಿಕ ಮನನೊಂದು ಆತ್ಮಹತ್ಯೆಗೈದಿರುವುದಾಗಿ ವರದಿಯಾಗಿದೆ. ಉಪ್ಪಳದಲ್ಲಿ ವಾಸವಾಗಿರುವ ಅಬ್ದುಲ್ ಹಮೀದ್ (65) ಎಂಬಾತ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ರವಿವಾರ ರಾತ್ರಿ ತಲಪಾಡಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಆ ಮಾರ್ಗವಾಗಿ ಬಂದ ನಾಲ್ಕು ಸಾರಿಗೆ ಬಸ್ಸುಗಳು ನಿಲುಗಡೆ ನೀಡದೆ ತೆರಳಿದ ಕಾರಣ ಅಸಮಾಧಾನಗೊಂಡಿದ್ದು ಕೊನೆಯದಾಗಿ ಬ೦ದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೂ ನಿಲುಗಡೆ ನೀಡದ ಹಿನ್ನೆಲೆಯಲ್ಲಿ ಕಲ್ಲೆಸೆದಿದ್ದು, ಬಸ್‌ನ ಹಿಂಭಾಗದ ಗಾಜು ಹಾನಿಗೊಳಗಾಗಿತ್ತು. ಘಟನೆ ಬಳಿಕ ಬಸ್ಸನ್ನು ತಕ್ಷಣ ನಿಲ್ಲಿಸಿದ ಚಾಲಕ ಹಾಗೂ ನಿರ್ವಾಹಕರು ಕಲ್ಲೆಸೆದ ಆರೋಪಿಯನ್ನು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಅಬ್ದುಲ್‌ ಹಮೀದ್‌ ಅವರನ್ನು ಮಂಜೇಶ್ವರ ಪೊಲೀಸ್‌ ಠಾಣೆಗೆ ಕರೆದೊಯ್ದು ಪಾಥಮಿಕ ತನಿಖೆ ನಡೆಸಿದ್ದಾರೆ ತನಿಖೆಯ ವೇಳೆ ಘಟನೆ ನಡೆದ ಸ್ಥಳವು ಗಡಿ ಪ್ರದೇಶವಾದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿರುವ  ಹಿನ್ನೆಲೆಯಲ್ಲಿ ಪ್ರಕರಣವನ್ನು ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿತ್ತು.ಇದರಂತೆ ಉಳ್ಳಾಲ ಠಾಣೆಗೆ ತೆರಳಿದ ಅಬ್ದುಲ್‌ ಹಮೀದ್ ಜಾಮೀನಿನಲ್ಲಿ ಹೊರಬಂದು ನೇರವಾಗಿ ತಮ್ಮ ಮನೆಗೆ ತೆರಳಿ‌ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊ೦ಡಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ನೆರೆಯ ಮಂಗಳೂರಿಗೆ ಸಂಚರಿಸುವ ಹಲವು ಬಸ್ಸುಗಳ ಡ್ರೈವರ್ ಗಳು ರಾತ್ರಿ ವೇಳೆ ಬಸ್ ನಿಲುಗಡೆಗೆ ಆಸ್ಪದ ನೀಡದಿರುವುದರಿಂದ ಅಮಾಯಕ ಪ್ರಯಾಣಿಕರು ಅಸಮಾಧಾನ‌ಪಡುವಂತಾಗುತ್ತದೆ ಎಂದು ಸಾರ್ವಜನಿಕವಾಗಿ ದೂರುಗಳು ಕೇಳಿ ಬರುತ್ತಿದೆ.

Post a Comment

0 Comments