Ticker

6/recent/ticker-posts

Ad Code

ಮಹಾಜನ ಸಂಸ್ಕೃತ ಕಾಲೇಜು ಸಪ್ತದಿನ ಎನ್‌ ಎಸ್‌ ಎಸ್ ಸಹವಾಸ ಶಿಬಿರ ಸಮಾಪ್ತಿ

  

ನೀರ್ಚಾಲು: ಮಹಾಜನ ಸಂಸ್ಕೃತ ಕಾಲೇಜು ಎಚ್ ಎಸ್ ಎಸ್ ನ ಸಪ್ತದಿನ ಎನ್‌ ಎಸ್‌ ಎಸ್ ಸಹವಾಸ ಶಿಬಿರವು ಬೇಳ ಜಿ.ಡಬ್ಲ್ಯು. ಕಿರಿಯ ಪ್ರಾಥಮಿಕ ಶಾಲೆ, ಕಡಂಬಳದಲ್ಲಿ ನಡೆಯಿತು. ಈ ಶಿಬಿರದ ಅಂಗವಾಗಿ ಮಂಗಳೂರು ಬ್ಯಾಂಕ್ ಆಫ್ ಬರೋಡಾ ಶಾಖೆಯ ವತಿಯಿಂದ ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ  ಶ್ರೀ ಜ್ಯೋತಿರಾಜ್ ಸಿಇಒ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಬ್ಯಾಂಕ್ ಆಫ್ ಬರೋಡಾ ಭಾಗವಹಿಸಿ ಶಿಬಿರಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದರು. ಜೀವನ್ ಕೊಲ್ಯ, ಪ್ರೋಗ್ರಾಂ ಮ್ಯಾನೇಜರ್, ಭಾರತೀಯ ವಿಕಾಸ್ ಟ್ರಸ್ಟ್, ಮಣಿಪಾಲ ಅವರು ವಿಭಿನ್ನ ಆಟಗಳ ಮೂಲಕ ಜೀವನ ಶೈಲಿ ತರಬೇತಿಯನ್ನು ನೀಡಿದರು. ವಿ.ಆರ್.ಡಿ.ಎಫ್ ಸಿಬ್ಬಂದಿ  ಪಂಡರಿನಾಥ್ ಸಹಕಾರ ನೀಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಮಹಾಜನ ಸಾಂಸ್ಕೃತ ಕಾಲೇಜು ಎಚ್ ಎಸ್ ಎಸ್ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಸುಕುಮಾರ್ ಕುದ್ರೆಪ್ಪಾಡಿ, ಮಾತೃ ಸಂಘದ ಅಧ್ಯಕ್ಷೆ ಗಿರಿಜಾ ತಾರಾನಾಥ್ ಉಪಸ್ಥಿತರಿದ್ದರು.

Post a Comment

0 Comments