Ticker

6/recent/ticker-posts

Ad Code

ಕದ್ದ ಬೈಕ್ ಗೆ ಬೆಂಕಿ ಹಚ್ಚಿ ಸುಟ್ಟು ಕಿಡಿಗೇಡಿ ಕೃತ್ಯ

 

ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದು ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ನಂಜನಗೂಡು ಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿ ಕಳ್ಳತನವಾಗಿದ್ದ ದ್ವಿಚಕ್ರ ವಾಹನ ಬೆಂಕಿಗೆ ಆಹುತಿಯಾಗಿದೆ. ಮಹದೇಶ್ವರ ಬಡಾವಣೆಯ ಸುರೇಶ್ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನ ಕೆಎ 09 ಎಚ್ ಎ 1155 ಪಲ್ಸರ್ ಬೈಕ್ ಸುಟ್ಟು ಕರಕಲಾಗಿದೆ. ನಂಜನಗೂಡಿನ  ಕಾರ್ಖಾನೆಯೊಂದರಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಸುರೇಶ್  ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಪಲ್ಸರ್ ಬೈಕ್ ರಾತ್ರೋರಾತ್ರಿ ಕಳ್ಳತನವಾಗಿತ್ತು. ಬೆಳಗಾಗುವುದರೊಳಗೆ ಕೊರೆಹುಂಡಿ ಸಮೀಪದ ಹುಲ್ಲಹಳ್ಳಿ ನಾಲೆಯ ಬಳಿ ಸುಟ್ಟು ಕರಕಲಾಗಿದೆ. ನಂಜನಗೂಡು ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರ ಇದೇ ಸ್ಥಳದಲ್ಲಿ ಯುವಕನೊಬ್ಬ ಬೈಕ್ ಸಮೇತ ಸಜೀವ ದಹನವಾಗಿದ್ದ ಪ್ರಕರಣ ಮಾಸುವ ಮುನ್ನ ಘಟನೆ ನಡೆದಿರುವುದು ನಂಜನಗೂಡಿನ ಜನತೆಗೆ ಆತಂಕ ತಂದಿದೆ.

Post a Comment

0 Comments