ಪತ್ತನಂತಿಟ್ಟ : ಶಬರಿಮಲೆಯಲ್ಲಿ ಮಕರ ಸಂಕ್ರಮಣದ ಜ್ಯೋತಿ ದರ್ಶನದ ದಿನ ಸಮೀಪಿಸುತ್ತಿದ್ದಂತೆ ಭಕ್ತ ಜನಸಾಗರ ಹೆಚ್ಚಾಗತೊಡಗಿದೆ. ಗುರುವಾರ ಬೆಳಿಗ್ಗೆ 18ನೇ ಮೆಟ್ಟಿಲು ಹತ್ತಲು ಯಾತ್ರಿಕರ ದೀರ್ಘ ಸರತಿ ಸಾಲು ಕಂಡು ಬಂದಿದೆ ಎಂದು ದೇವಸ್ವಂ ಮಂಡಳಿ ತಿಳಿಸಿದೆ. ಸನ್ನಿಧಾನದಲ್ಲಿ ಜನಸಂದಣಿ ಹೆಚ್ಚಾದಂತೆ, ಪೊಲೀಸರು ಪಂಪಾದಿಂದ ನಿಬಂಧನೆಗಳನ್ನು ವಿಧಿಸುತ್ತಿದ್ದಾರೆ. ಮಕರವಿಳಕ್ಕು ದಿನವಾದ 14 ರಂದು ಕೇವಲ 35,000 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ದೇವಸ್ವಂ ಮಂಡಳಿ ತಿಳಿಸಿದೆ. ಜ.13 ರಂದು, ವರ್ಚುವಲ್ ಸರತಿ ಸಾಲಿನಲ್ಲಿ ಸೇರಿದ 35,000 ಜನರು ಸೇರಿದಂತೆ 40,000 ಯಾತ್ರಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿಯಿದೆ.

0 Comments