Ticker

6/recent/ticker-posts

Ad Code

ಬಡ್ಸ್ ಶಾಲೆಯನ್ನು ಶ್ರಮದಾನದ ಮೂಲಕ ಶುಚಿಗೊಳಿಸಿ ಮಾದರಿಯಾದ ಮಜಿರ್ಪಳ್ಳಕಟ್ಟೆ ಬಿಜೆಪಿ ಕಾರ್ಯಕರ್ತರು

 

ಬೇಳ : ಬದಿಯಡ್ಕ ಗ್ರಾಮ ಪಂಚಾಯತಿನ 1ನೇ ವಾರ್ಡ್ ಮಜಿರ್ಪಳ್ಳಕಟ್ಟೆಯಲ್ಲಿ ನಡೆಸಲ್ಪಡುತ್ತಿರುವ ಬಡ್ಸ್ ಸ್ಕೂಲ್ ನಲ್ಲಿ  4 ನೀರಿನ ಟ್ಯಾಂಕುಗಳು ಬೋರುನೀರಿನ ಚೇಡಿ ಮಣ್ಣಿನಿಂದ ತುಂಬಿದ್ದು ಶುದ್ದನೀರು ಸಂಗ್ರಹಕ್ಕೆ ಸಮಸ್ಯೆಯಾಗಿದ್ದವು. ಇದನ್ನು ಮನಗಂಡ ವಾರ್ಡಿನ ಬಿಜೆಪಿ  ಸಮಿತಿಯ ಯುವ ಕಾರ್ಯಕರ್ತರು ಈ ನಾಲ್ಕೂ ಟ್ಯಾಂಕುಗಳನ್ನು  ಪೂರ್ತಿಯಾಗಿ ಶುಚಿಗೊಳಿಸಿ ಸಮಾಜಕ್ಕೆ  ಮಾದರಿಯಾದರು. ಈ ಹಿಂದೆಯೇ ಕುಡಿನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಬಡ್ಸ್ ಸ್ಕೂಲಿಗೆ ಬಿಜೆಪಿ ಆಡಳಿತದ ನೂತನ ಪಂಚಾಯತ್ ಸಮಿತಿಯ ವತಿಯಿಂದ ಬೋರ್-ವೆಲ್ ಗೆ ನೂತನ ಮೋಟಾರು ಅಳವಡಿಸಿ ನೀರಿನ ಸಮಸ್ಯೆ ಬಗೆಹರಿಸಲಾಗಿತ್ತು.

Post a Comment

0 Comments