ಬೆಂಗಳೂರು: ಯುವತಿಯ ಮೋಹಕ್ಕೆ ಬಿದ್ದು ಯುವಕನೊಬ್ಬ ಸ್ವತಃ ಬಟ್ಟೆ ಬಿಚ್ಚಿದ ವಿಡಿಯೋ ಕಾಲ್ ಮೂಲಕ ಒಂದೂವರೆ ಲಕ್ಷ ರೂ. ಹಣವನ್ನು ಕಳೆದುಕೊಂಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ 26 ವರ್ಷದ ಯುವಕನೊಬ್ಬ ಹೇಪನ್ ಡೇಟಿಂಗ್ ಆ್ಯಪ್‌ನ ಖಾತೆ ಮೂಲಕ ಇಶಾನಿ ಎಂಬ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ, ಮೊಬೈಲ್ ನಂಬರ್ ಶೇರ್ ಆಗಿ, ಖಾಸಗಿ ವಿಚಾರಗಳನ್ನು ಚಾಟಿಂಗ್ ಮಾಡಿದ್ದರು.
ಕೆಲ ದಿನಗಳ ಹಿಂದೆ ಯುವತಿಯ ಮೊಬೈಲಿನಿಂದ ವಿಡಿಯೋ ಕಾಲ್ ಬಂದಿತ್ತು. ಆ ವಿಡಿಯೋ ಕಾಲ್‌ನಲ್ಲಿ ಯುವತಿ ಬೆತ್ತಲಾಗಿದ್ದಳು. ನಂತರ ನೀನು ಬಟ್ಟೆ ಬಿಚ್ಚು ಎಂದು ಯುವಕನನ್ನು ಬಟ್ಟೆ ಬಿಚ್ಚಿಸಿದ್ದಳು. ಯುವಕ ಬೆತ್ತಲಾಗಿದ್ದನ್ನು ರೆಕಾರ್ಡ್ ಮಾಡಿಕೊಂಡು, ನಂತರ ಯುವಕನಿಗೆ ಆತನ ಬೆತ್ತಲೆ ಫೋಟೊಗಳನ್ನು ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಯುವಕನಿಂದ ಹಂತ ಹಂತವಾಗಿ 1.53 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಇನ್ನೂ ಹಣ ಕೇಳಿದಾಗ ಕೇಂದ್ರ ಸೆನ್ ಠಾಣೆಗೆ ಯುವಕ ದೂರು ನೀಡಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಪ್ರಾಥಮಿಕ ತನಿಖೆಯಲ್ಲಿ ಎಐ ಯುವತಿ ಮೂಲಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ದಾಳುಲಿಸಿದ ಪೋಲಿಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ.

0 Comments