Ticker

6/recent/ticker-posts

Ad Code

ಕಾಸರಗೋಡು ಜಿಲ್ಲೆಯ 59 ಸ್ಥಳಗಳಲ್ಲಿ ಹೊಸ ಅಕ್ಷಯ ಕೇಂದ್ರಕ್ಕೆ ಅರ್ಜಿ ಆಹ್ವಾನ

ಕಾಸರಗೋಡು ; ಕೇರಳ ಸರಕಾರದ ಅಧಿಕೃತ ಅಂತರ್ಜಾಲಿಕ ಸೇವಾ ಸಂಸ್ಥೆಯಾಗಿರುವ ಅಕ್ಷಯ ಕೇಂದ್ರಗಳನ್ನು ಕಾಸರಗೋಡು ಜಿಲ್ಲೆಯ 59 ಸ್ಥಳಗಳಲ್ಲಿ ತೆರೆಯುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜನರಲ್ ವಿಭಾಗದಲ್ಲಿ 52, ಪರಿಶಿಷ್ಟಜಾತಿ 5, ಪರಿಶಿಷ್ಟ ವರ್ಗ 2 ಕೇಂದ್ರಗಳಿಗೆ ವ್ಯವಸ್ಥಾಪಕರನ್ನು  ಆಯ್ಕೆ ಮಾಡುವುದಾಗಿರುತ್ತದೆ.

 01.01.2026 ಕ್ಕೆ  18 ವರ್ಷ ದಾಟಿದವರೂ 50 ವರ್ಷ ವಯಸ್ಸಿನೊಳಗಿನವರೂ ಆಗಿರುವ ಅರ್ಹ ವ್ಯಕ್ತಿಗಳು ಓನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 

ಕನಿಷ್ಟ ಅರ್ಹತೆ: ಪ್ಲಸ್ ಟು / ಪ್ರೀಡಿಗ್ರಿ ಕಡ್ಡಾಯ ಮತ್ತು  ಕಂಪ್ಯೂಟರ್ ಜ್ಞಾನ ಹೊಂದಿರುವುದು ಆದ್ಯತೆ. ಹೆಚ್ಚುವರಿ ಅರ್ಹತೆಗಳನ್ನೂ ಪರಿಗಣಿಸಬಹುದಾಗಿದೆ. ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ  ವರ್ಗದವರಿಗೂ ಸ್ವಂತ/ ಬಾಡಿಗೆ ಕೊಠಡಿ ಇರುವವರಿಗೂ ಅಧಿಕ ಮಾರ್ಕ್ ಲಭಿಸುವುದು. SC/ST ಗಾಗಿ ವಿಶೇಷವಾಗಿ ಮೀಸಲಿರಿಸಿದ ಕೇಂದ್ರಗಳಿವೆ.  

 ವ್ಯವಸ್ಥಾಪಕರಾಗಿ ಆಯ್ಕೆಯಾಗುವವರು ನಿಗದಿತ ಸ್ಥಳದಲ್ಲಿ 300 ಚದರ ಅಡಿಗಿಂತ ಕಡಿಮೆಯಾಗದ ವಿಸ್ತೀರ್ಣದ ಸ್ಥಳ ಹಾಗೂ ಕಂಪ್ಯೂಟರ್ ಸಂಬಂಧಿತ ಸೌಲಭ್ಯಗಳನ್ನು ಒದಗಿಸಬೇಕು. ಅರ್ಜಿದಾರನು ಆನ್‌ಲೈನ್ ಅರ್ಜಿಯಲ್ಲಿ ಗರಿಷ್ಠ 3 ಸ್ಥಳಗಳನ್ನು ಆಯ್ಕೆ ಮಾಡಬಹುದು. 

ಅರ್ಜಿ ಸಲ್ಲಿಸುವಾಗ ಮೂಲ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಮಾತ್ರ ಅಪ್‌ಲೋಡ್ ಮಾಡಬೇಕು. ಮೌಲ್ಯಮಾಪನ ವೇಳೆ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು. ಫೋಟೋಸ್ಟಾಟ್ ಪ್ರತಿಗಳನ್ನು ಯಾವುದೇ ಕಾರಣಕ್ಕೂ ಅಪ್‌ಲೋಡ್ ಮಾಡುವಂತಿಲ್ಲ ಅಥವಾ ಮೌಲ್ಯಮಾಪನ ವೇಳೆ ಸಲ್ಲಿಸುವಂತಿಲ್ಲ. ತಪ್ಪಾದ, ಅಪೂರ್ಣ ಅಥವಾ ಸ್ಪಷ್ಟವಲ್ಲದ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ಸ್ವಂತ ಅಥವಾ ಬಾಡಿಗೆ ಕಟ್ಟಡ ಸೌಲಭ್ಯವಿದೆ ಎಂದು ಅರ್ಜಿಯಲ್ಲಿ ದಾಖಲಿಸುವವರು, K-smart ಪೋರ್ಟಲಿನಲ್ಲಿ ಲಭಿಸುವ ಬಿಲ್ಡಿಂಗ್, ಓನರ್ ಶಿಪ್ ಸರ್ಟೀಫಿಕೇಟ್, ಬಾಡಿಗೆ ಕರಾರ್ ಎಂಬಿವುಗಳನ್ನು ಸಮರ್ಪಿಸಬೇಕು. 

 ಆ ಕಟ್ಟಡ/ಕೊಠಡಿ ನಿಗದಿತ ಸ್ಥಳದಲ್ಲೇ ಇರಬೇಕು. ಕೊಠಡಿಗೆ ಕನಿಷ್ಠ 300 ಚದರ ಅಡಿ ವಿಸ್ತೀರ್ಣ ಕಡ್ಡಾಯವಾಗಿದೆ. ಜೊತೆಗೆ ಕಟ್ಟಡ/ಕೊಠಡಿ ಅರ್ಜಿದಾರರ ಹೆಸರಿನಲ್ಲಿರಬೇಕು ಅಥವಾ ಅರ್ಜಿದಾರರ ಹೆಸರಿನ ಬಾಡಿಗೆ ಅಗ್ರಿಮೆಂಟ್ ಪ್ರತಿ ಲಗತ್ತಿಸಬೇಕು.  ಪರಿಶೋಧನೆಯ ವೇಳೆ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು. ಹೊಸದಾಗಿ ಆರಂಭಿಸುವ ಅಕ್ಷಯ ಕೇಂದ್ರಗಳು ನೆಲ ಮಟ್ಟದ ಕೋಣೆಗಳಲ್ಲಿಯೇ ಕಾರ್ಯಾಚರಿಸಬೇಕು.  ಅಪ್‌ಲೋಡ್ ಮಾಡುವ ಹಾಗೂ ಪರಿಶೋಧನೆ ವೇಳೆ ಹಾಜರುಪಡಿಸುವ ಎಲ್ಲಾ ದಾಖಲೆಗಳು ಮಾನ್ಯತೆ ಪಡೆದ ಸಂಸ್ಥೆಗಳಿಂದ ನೀಡಲ್ಪಟ್ಟಿರಬೇಕು. ಇಲ್ಲದಿದ್ದರೆ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ಅರ್ಜಿದಾರನಿಗೆ ಇಲ್ಲದ ಅರ್ಹತೆಯನ್ನು ಯಾವುದೇ ಕಾರಣಕ್ಕೂ ಅರ್ಜಿಯೊಂದಿಗೆ ಸಲ್ಲಿಸುವುದಕ್ಕೂ ಅಥವಾ ಹಕ್ಕು ಮಂಡಿಸುವುದಕ್ಕೂ ಅವಕಾಶ ಇಲ್ಲ.

ಈಗಾಗಲೇ ಅಕ್ಷಯ ಕೇಂದ್ರ ವ್ಯಪಸ್ಥಾಪಕರು, ವ್ಯವಸ್ಥಾಪಕರಾಗಿ ಆಯ್ಕೆಯಾದವರು, ಈ ಹಿಂದೆ ಕೇಂದ್ರ ರದ್ದುಗೊಳಿಸಲ್ಪಟ್ಟವರೂ ಅರ್ಜಿ ಸಲ್ಲಿಸುವಂತಿಲ್ಲ. ಇಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಸಲ್ಲಿಸಲ್ಪಟ್ಟ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಮುಂದಿನ ಎಲ್ಲಾ ಸೂಚನೆಗಳನ್ನೂ/ಅಧಿಸೂಚನೆಗಳನ್ನೂ ಅರ್ಜಿಯಲ್ಲಿ ನೀಡಿದ ಇ-ಮೇಲ್ ಗೆ ಮಾತ್ರ ಕಳುಹಿಸಲಾಗುತ್ತದೆ. ಆದ್ದರಿಂದ ಇ-ಮೇಲ್ ವಿಳಾಸವನ್ನು ಸರಿಯಾಗಿ ನಮೂದಿಸಬೇಕು. ಅರ್ಜಿ ಸಲ್ಲಿಸುವ ವೇಳೆ ಶುಲ್ಕವಾಗಿ ರೂ  750 ನ್ನು ಓನ್ಲೈನ್ ಪೇ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ ಕೊಂಡಿ:  https://lbsedp.lbscentre.in/akshaya26/    ಆಗಿರುತ್ತದೆ.  ಮಾರ್ಚ್ 7,2026 ಕೊನೇಯ ದಿನಾಂಕವಾಗಿರುತ್ತದೆ. ಸಂಶಯ ನಿವಾರಣೆಗಾಗಿ LBS ಹೆಲ್ಪ್ ಲೈನ್ 04712560311, 312. ವಾಟ್ಸಪ್ 9400923669. ಅಥವಾ lbssentre@gmail.com ಎಂಬ ವಿಳಾಸಕ್ಕೆ ಇ ಮೈಲ್ ಮಾಡಬಹುದಾಗಿದೆ. 

 ಹೆಚ್ಚಿನ ವಿವರಗಳಿಗೆ 04994227170 ನಂಬರಿಗೆ ಕರೆಮಾಡಬಹುದು. adpoksd.akshaya@kerala.gov.in ಎಂಬುವುದಕ್ಕೆ ಮೈಲ್ ಮಾಡಬಹುದು. ಅಥವಾ https://akshaya.Kerala.gov.in ಎಂಬ ಸೈಟನ್ನು ಸಂದರ್ಶಿಸಬಹುದಾಗಿದೆ.

Post a Comment

0 Comments