ಕಾಸರಗೋಡು: ಅಕ್ರಮ ಭೂಸ್ವಾಧೀನದಿಂದ ಅಪಾಯದಲ್ಲಿರುವ ಕಾಸರಗೋಡು ಜಿಲ್ಲೆಯ ಚೆಮ್ನಾಡು ಪಂಚಾಯತ್ ನ ಕಳನಾಡಿನಲ್ಲಿರುವ ಚಂದ್ರಗಿರಿ ಕೋಟೆಯ ರಕ್ಷಣೆಗೆ ಜಿಲ್ಲಾಡಳಿತ ಹಾಗೂ ರಾಜ್ಯಾಡಳಿತ ಸಿದ್ಧವಾಗಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆಗ್ರಹಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಟಿ.ಪುರುಷೋತ್ತಮನ್, ಜಿಲ್ಲಾ ಸಮಿತಿ ಸದಸ್ಯ ಶ್ರೀನಿವಾಸನ್ ಕೀಜೂರು, ಉದುಮ ಮಂಡಲ ಉಪಾಧ್ಯಕ್ಷ ಸದಾಶಿವನ್ ಮಣಿಯಂಗಾನಂ, ಕಾರ್ಯದರ್ಶಿ ಸೌಮ್ಯ ಪದ್ಮನಾಭನ್, ಖಜಾಂಜಿ ರತೀಶ್ ವಿ.ಎ, ಚೆಮ್ನಾಡು, ಪಶ್ಚಿಮ ವಲಯದ ಅಧ್ಯಕ್ಷ ರಾಜೇಶ್ ಕೈಂತಾರ್, ಪಶ್ಚಿಮ ಕ್ಷೇತ್ರ ಸಮಿತಿ ಸದಸ್ಯರಾದ ಪ್ರಮೋದ್ ಕೀಜ್‌ಪುರಂ ಮೊದಲಾವರು ಸ್ಥಳ ಸಂದರ್ಶಿಸಿದರು. ಪ್ರವಾಸೋದ್ಯಮಕ್ಕೆ ಅಪಾರ ಅವಕಾಶವಿರುವ ಚಂದ್ರಗಿರಿ ಕೋಟೆಯನ್ನು ರಕ್ಷಿಸುವ ಬದಲು, ಸ್ಥಳೀಯ ಆಡಳಿತಗಳು, ಜಿಲ್ಲೆ ಮತ್ತು ರಾಜ್ಯ ಆಡಳಿತಗಳು ಕೈಕಟ್ಟಿ ಕುಳಿತಿವೆ. ನೂರಾರು ಲೋಡ್‌ಗಳಷ್ಟು ಮಣ್ಣನ್ನು ಸಾಗಿಸುತ್ತಿದ್ದರೂ ಹತ್ತಿರದಲ್ಲಿರುವ ಕಳನಾಡ್ ಗ್ರಾಮ ಕಚೇರಿಯ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿದ್ದಾರೆ, ಇದು ಚಂದ್ರಗಿರಿ ಕೋಟೆಗೆ ಅಪಾಯವನ್ನುಂಟುಮಾಡುತ್ತಿದೆ ಎಂದು ಅಶ್ವಿನಿ ಆರೋಪಿಸಿದರು.

0 Comments