Ticker

6/recent/ticker-posts

Ad Code

ಕಾಸರಗೋಡು ಪೇಟೆಯಲ್ಲಿ ಬಲಪಂಥೀಯ ಕಾರ್ಮಿಕ ಸಂಘಟನೆಯಿಂದ ಬೆಂಬಲ ಮೆರವಣಿಗೆ

 

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಗಳು ಮತ್ತು ಶಿಕ್ಷಕರ ಸೇವಾ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಬಲಪಂಥೀಯ ಕಾರ್ಮಿಕ ಸಂಘಟನೆಗಳು ಕಾಸರಗೋಡಿನ ಹಳೆ ಬಸ್‌ ನಿಲ್ದಾಣದಿಂದ ಪ್ರತಿಭಟನೆ ಮೆರವಣಿಗೆ ನಡೆಸಿದವು.  ಕೆಎಸ್‌ಆರ್‌ಟಿಸಿ  ಹಳೆ ಬಸ್‌ ನಿಲ್ದಾಣದಲ್ಲಿ ಮುಕ್ತಾಯಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಟಿ.ವಿ.ಕುಂಞಿರಾಮನ್, ಕೆ.ಪಿ.ಮಹಮ್ಮದ್ ಅಶ್ರಫ್, ಶೆರೀಫ್ ಕೊಡವಂಚಿ, ಅಶ್ರಫ್ ಎಡನೀರ್, ಎ.ಅಹ್ಮದಾಲಿ, ಅರ್ಜುನ್ ತಾಯಲಂಗಡಿ, ಬಿ.ಸಿ.ಕುಮಾರನ್, ಸಿ.ವಿ.ಉಮೇಶನ್, ಮುತಾಲೀಬ್, ಬೀಫಾತಿಮ ಇಬ್ರಾಹಿಂ, ಮೊಯ್ದೀನ್ ಕೊಲ್ಲಂಪಾಡಿ, ಮೊದಲಾದವರ ನೇತೃತ್ವದಲ್ಲಿ ಸಾರ್ವಜನಿಕ ಸಭೆಯೂ ನಡೆಯಿತು.

ಚಿತ್ರ : ಶ್ರೀಕಾಂತ್ ಕಾಸರಗೋಡು

Post a Comment

0 Comments