Ticker

6/recent/ticker-posts

Ad Code

ಸನ್ಯಾಸಿ ವೇಷಧರಿಸಿಕೊಂಡು ನಕಲಿ ಹುಲಿ ಉಗುರು ಮಾರಾಟ ಮಾಡಲು ಯತ್ನ- ಓರ್ವ ವಶಕ್ಕೆ

 

ಉಡುಪಿ : ಸನ್ಯಾಸಿ ವೇಷಧರಿಸಿಕೊಂಡು ನಕಲಿ ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ವಂಚಕನೋರ್ವನನ್ನು ವಶಕ್ಕೆ ಪಡೆಯುವಲ್ಲಿ ಉಡುಪಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾರ್ಯಾಚರಣೆಗೆ ಉಡುಪಿ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ನೆರವಾಗಿದ್ದರು.

ವಂಚಕ ನಕಲಿ ಹುಲಿ ಉಗುರನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಸಾರ್ವಜನಿಕರು ನಾಗರಿಕ ಸಮಿತಿಯ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಆತ ಪರಾರಿಯಾಗಲು ಯತ್ನಿಸಿದಾಗ ನಗರ ಪೋಲಿಸ್ ಠಾಣೆಯ‌ ಪೋಲಿಸರು ನಗರದ ಹಳೆ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆದು ಬಳಿಕ, ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

Post a Comment

0 Comments