Ticker

6/recent/ticker-posts

Ad Code

ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

 

ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಬ್ರಹ್ಮಕಲಶೋತ್ಸವ ಈ ವರ್ಷ ಏ.26 ರಿಂದ ಮೇ 2 ವರೆಗೆ ವಿಜ್ರಂಭಣೆಯಿಂದ ನಡೆಯಲಿದ್ದು, ಈ ಸಂಬಂಧ ಆಮಂತ್ರಣ ಪತ್ರಿಕೆ ಬಿಡುಗಡೆ ದೇವಾಲಯ ಆವರಣದಲ್ಲಿ  ನಡೆಯಿತು. 

ಮಾಯಿಪ್ಪಾಡಿ ಅರಮನೆಯ ರಾಜಪ್ರತಿನಿಧಿ  ರಘುರಾಮ ವರ್ಮರಾಜ ಅನಾವರಣಗೊಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಮಾಯಿಪ್ಪಾಡಿ ಅರಮನೆಯ ಸುಶೋಭಿತ ಕೃಷ್ಣ, ಕಾಳ್ಯಂಗಾಡು ದೇವಾಲಯದ ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನರಾಜ್ ಕಾಳ್ಯಂಗಾಡು, ಮಹಿಳಾ ಸಮಿತಿ ಅಧ್ಯಕ್ಷೆ ರಾಧಿಕಾ ರಂಜಿತ್, ದಿ.ಮಹಾಲಿಂಗ ಪಾತ್ರಿ ಅವರ ಧರ್ಮಪತ್ನಿ ಪುಷ್ಪಲತಾ ಕಾಳ್ಯಂಗಾಡು, ಕನ್ನಡ ಭವನ ಸಂಸ್ಥಾಪಕ ಡಾ.ಕೆ.ವಾಮನರಾವ್ ಬೇಕಲ್, ನಿರ್ದೇಶಕಿ ಸಂಧ್ಯಾರಾಣಿ ಟೀಚರ್, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು, ನ್ಯಾಯವಾದಿ ಸದಾನಂದ ರೈ, ದಾರ್ಮಿಕ ಮುಂದಾಳುಗಳಾದ ಚಿದಾನಂದ ಕೊರಕ್ಕೋಡು, ರಘು ಮೀಪುಗುರಿ, ಲವ ಮೀಪುಗುರಿ, ಸುಕುಮಾರ ಕುದ್ರೆಪ್ಪಾಡಿ, ವಸಂತ ಪೂಜಾರಿ ಕೊರಕ್ಕೋಡು ಬಯಲು ತರವಾಡು, ರಾಜಕೀಯ ಧುರೀಣ ಭುಜಂಗ ಶೆಟ್ಟಿ, ನಗರಸಭೆ ಸದಸ್ಯ ಕೆ.ಎನ್.ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್, ಜಗದೀಶ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು. 

ಸ್ಥಳೀಯ ಬಾಲಗೋಕುಲ ಮಕ್ಕಳು ಪ್ರಾರ್ಥನೆ ಹಾಡಿದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಶಾಂತ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್. ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ರಂಜಿತ್ ಮನ್ನಿಪ್ಪಾಡಿ, ಗೋವಿಂದ ಕಾಳ್ಯಂಗಾಡ್ ವರು ನೇತೃತ್ವ ವಹಿಸಿದರು. ಪತ್ರಕರ್ತ ವೀಜಿ. ಕಾಸರಗೋಡು ಕಾರ್ಯಕ್ರಮ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾನಂದ ಪೂಜಾರಿ ವಂದಿಸಿದರು.

Post a Comment

0 Comments