ಕುಂಬಳೆ : ಕಿದೂರು ಶ್ರೀ ಮಹಾದೇವ ಕ್ಷೇತ್ರದಲ್ಲಿ ಶಿವರಾತ್ರಿ ಮಹೋತ್ಸವದ ಅಂಗವಾಗಿ ಶಿವ ಸೇವಾ ವೃಂದ ಕಿದೂರು ಇವರ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಕ್ಷೇತ್ರದ ಗುರಿಕ್ಕಾರ ಶ್ರೀಕೃಷ್ಣ ಭಟ್ ಮಾಳಿಗೆ ಮನೆ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಕ್ಷೇತ್ರದ ಆಡಳಿತ ಟ್ರಸ್ಟಿ ಸದಸ್ಯ ಮನೋರಾಜ್ ರೈ ಕಿದೂರು ಗುತ್ತು ಗಡಿನಾಡು ಸಾಂಸ್ಕೃತಿಕ ಕಲಾವೇದಿಕೆ ಕಾಸರಗೋಡು ಇದರ ಕಾರ್ಯದರ್ಶಿ ಗುರುರಾಜ್ ಕಾಸರಗೋಡು, ಸಂಘದ ಅಧ್ಯಕ್ಷ ಸದಾಶಿವ ರೈ ಕಿದೂರು ಮೇಗಿನಮನೆ, ಉಪಾಧ್ಯಕ್ಷ ಉಮೇಶ ಪಿ, ಜತೆ ಕಾರ್ಯದರ್ಶಿ ಹರಿಪ್ರಸಾದ್, ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಧರ ಪುಣಿಯೂರು, ಸದಸ್ಯ ಧೀರಜ್ ಪಿ.ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ವಿಗಾಗಿ ಹಮ್ಮಿಕೊಂಡ ಜಾಹೀರಾತು ಸಂಗ್ರಹದಲ್ಲಿ ಅತಿ ಹೆಚ್ಚು ಜಾಹೀರಾತು ಸಂಗ್ರಹಿಸಿದ ಸಂಘದ ಸದಸ್ಯರಿಗೆ ಗೌರವಾರ್ಪಣೆ ನೀಡಲಾಯಿತು. ಅಶೋಕ ಪುಣಿಯೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಭರತ್ ರಾಜ್ ಸ್ವಾಗತಿಸಿ, ಕೋಶಾಧಿಕಾರಿ ನಿತಿನ್ ಕುಮಾರ್ ವಂದಿಸಿದರು. ಬಳಿಕ ಗಡಿನಾಡು ಸಾಂಸ್ಕೃತಿಕ ಕಲಾ ವೇದಿಕೆ ಕಾಸರಗೋಡು ಇವರಿಂದ ನೃತ್ಯ ಕಾರ್ಯಕ್ರಮ ಮತ್ತು ಯಶಸ್ವಿ ಕಲಾವಿದರು ಮಂಜೇಶ್ವರ ಅಭಿನಯಿಸಿದ ಅಬ್ಬರ ತುಳು ಹಾಸ್ಯಮಯ ಭಯಾನಕ ನಾಟಕ ಪ್ರದರ್ಶನಗೊಂಡಿತು. ನೆರೆದ ನೂರಾರು ಅಭಿಮಾನಿಗಳು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.

0 Comments