Ticker

6/recent/ticker-posts

Ad Code

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 36ನೇ ವಾರ್ಷಿಕ ಮಹಾಸಭೆ : ಶಿವರಾಮ ಕಾಸರಗೋಡು ಅಧ್ಯಕ್ಷರಾಗಿ ಪುನರಾಯ್ಕೆ

ಕಾಸರಗೋಡು : ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ 2026-27 ನೇ ಸಾಲಿನ ಅಧ್ಯಕ್ಷರಾಗಿ ಸಂಸ್ಥಾಪಕ ಅಧ್ಯಕ್ಷ ಶಿವರಾಮ ಕಾಸರಗೋಡು ಪುನರಾಯ್ಕೆಗೊಂಡಿದ್ದಾರೆ. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 36 ನೇ ಸಾಲಿನ ವಾರ್ಷಿಕ ಮಹಾಸಭೆಯು ಕಾಸರಗೋಡು ಕನ್ನಡ ಗ್ರಾಮದಲ್ಲಿ  ನಡೆಯಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. 2025 - 26 ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು ಮಂಡಿಸಿ ಅನುಮೋದನೆ ಪಡೆದರು. 2026 - 27 ನೇ ಸಾಲಿನ ಯೋಜನೆಗೆ ರೂಪಾಯಿ 25 ಲಕ್ಷ ಮೊತ್ತವನ್ನು ಮುಂಗಡವಾಗಿ ಕಾಯ್ದಿರಿಸಲಾಯಿತು. ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಶಿವರಾಮ ಕಾಸರಗೋಡು ಅಧ್ಯಕ್ಷರು, ಎಸ್. ಎಲ್ . ಭಾರಧ್ವಜ್ ಬೇಕಲ್ ಉಪಾಧ್ಯಕ್ಷರು, ಕೆ. ಜಗದೀಶ್ ಕೂಡ್ಲು ಪ್ರಧಾನ ಕಾರ್ಯದರ್ಶಿ, ಕಾವ್ಯ ಕುಶಲ ಜೊತೆ ಕಾರ್ಯದರ್ಶಿ, ರಾಧಾ ಕೆ. ಕಾಸರಗೋಡು ಕೋಶಾಧಿಕಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಧಾಕೃಷ್ಣ ಕೆ . ಉಳಿಯತಡ್ಕ, ಕೆ.ಎನ್ ವೆಂಕಟ್ರಮಣ ಹೊಳ್ಳ ಕಾಸರಗೋಡು, ಕೆ ಗುರುಪ್ರಸಾದ ಕೋಟೆಕಣಿ, ಕುಶಲಕುಮಾರ್ .ಕೆ, ಶ್ರೀಕಾಂತ್ ಕಾಸರಗೋಡು, ಕಿಶೋರ್ ಕುಮಾರ್. ಕೆ, ದಿವಾಕರ ಪಿ .ಅಶೋಕನಗರ, ಕೆ .ಬಿ ದಯಾನಂದ ಮನ್ನಿಪ್ಪಾಡಿ, ಬಿ. ಸತೀಶ ಕೂಡ್ಲು, ಶಶಿಕುಮಾರ್ ಕೂಡ್ಲು, ಎನ್. ಯೋಗೀಶ್ ಕೋಟೆಕಣಿ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ  ಶಾರದ ಬಿ. ಕೌನ್ಸಿಲರ್ ಕಾಸರಗೋಡು ನಗರ ಸಭೆ, ಜಯಾನಂದ ಕುಮಾರ್ ಹೊಸದುರ್ಗ, ರಾಮಕೃಷ್ಣ ಮಯ್ಯ ಸಿರಿ ಬಾಗಿಲು, ಕಾಸರಗೋಡು ನಗರಸಭೆ ಮಾಜಿ ಕೌನ್ಸಿಲರ್ ಶಂಕರ್ ಕೆ . ಕೆ.ವರಪ್ರಸಾದ್ ಕೋಟೆಕಣಿ, ಕೆ .ವಿ ರಮೇಶ್ ಕಾಸರಗೋಡು, ಲವ ಕೆ. ಮೀಪುಗುರಿ, ಗಣೇಶ್ ನಾಯ್ಕ್. ಕೆ, ಪುರುಷೋತ್ತಮ ಎಂ. ನಾಯ್ಕ್ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಎನ್ . ಸಂದೇಶ್ ಕೋಟೆಕಣಿ ಅವರನ್ನು ಆಯ್ಕೆ ಮಾಡಲಾಯಿತು. 

Post a Comment

0 Comments