ಬದಿಯಡ್ಕ : ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಪೆರಣಾಲ ಶ್ರೀ ಉದನೇಶ್ವರ ದೇವಾಲಯದ ಜೀರ್ಣೋದ್ಧಾರ ನವೀಕರಣ ಕಾರ್ಯಗಳು ಕೊನೆ ಹಂತಕ್ಕೆ ತಲುಪಿದ್ದು, ನವೀಕರಣ ಕಾಮಗಾರಿಗಳು ಮುಗಿಸಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳು ಪ್ರಾರಂಭಗೊಂಡಿರುತ್ತದೆ. ಏಪ್ರಿಲ್ 17ರಿಂದ 28ರ ವರೆಗೆ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಕ್ಷೇತ್ರದ ಆಚಾರ್ಯರಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಮಹಾ ಸಭೆ ಜರಗಿತು. ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಭಟ್ ಚಂಬಲ್ತಿಮಾರ್ ಸಭೆಯ ಅಧ್ಯಕ್ಷತೆ ವಹಿಸಿದರು.
ವಿವಿಧ ಉಪ ಸಮಿತಿಗಳ ಕೆಲಸ ಕಾರ್ಯಗಳ ಅವಲೋಕನ ನಡೆಯಿತು. ಗೌರವಾಧ್ಯಕ್ಷ ಜಯದೇವ ಖಂಡಿಗೆ, ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲ ಗುತ್ತು, ಕೋಶಾಧಿಕಾರಿ ಸೂರ್ಯ ನಾರಾಯಣ ಬಿ , ಆಡಳಿತ ಮಂಡಳಿ ಸದಸ್ಯ ಸೀತಾರಾಮ ನವಕ್ಕಾನ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲ ಗುತ್ತು, ಕೃಷ್ಣ ಪ್ರಸಾದ್ ರೈ, ವಾರ್ಡು ಸದಸ್ಯ ಗಂಗಾಧರ ಗೋಇಯಡ್ಕ , ಗಣೇಶ ಕೃಷ್ಣ ಅಳಕ್ಕೆ, ನರೇಂದ್ರ ಬಿ ಎನ್, ಇಂಜಿನಿಯರ್ ರಾಜಗೋಪಾಲ ನವಕ್ಕಾನ, ಉದಯ ಶಂಕರ್ ಪಿ, ಗಣೇಶ ಪ್ರಸಾದ್ ಕಡಪ್ಪು, ರಾಘವೇಂದ್ರ ಪ್ರಸಾದ್ ಬದಿಯಡ್ಕ, ಸತ್ಯನಾರಾಯಣ ಶರ್ಮಾ, ರಾಜೇಶ್ ಮಾಸ್ತರ್ ಅಗಲ್ಪಾಡಿ, ಮಾತನಾಡಿದರು.
ವಿವಿಧ ಉಪ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಮಾತೃ ಸಮಿತಿ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದು, ಅಭಿಪ್ರಾಯ ವ್ಯಕ್ತಪಡಿಸಿದರು. ಬ್ರಹ್ಮ ಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಜತೆ ಕಾರ್ಯದರ್ಶಿ ಡಾ. ಶ್ರೀಶ ಕುಮಾರ್ ಪಂಜಿತ್ತಡ್ಕ ಸ್ವಾಗತಿಸಿ ಉಪಾಧ್ಯಕ್ಷ ಡಾ. ಶ್ರೀನಿಧಿ ಸರಳಾಯ ವಂದಿಸಿದರು.

0 Comments