Ticker

6/recent/ticker-posts

Ad Code

ನಾರಂಪಾಡಿಯಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು

 

ಬದಿಯಡ್ಕ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ, ದಕ್ಷಿಣ ಕನ್ನಡ ಜಿಲ್ಲೆ ಕಾಸರಗೋಡು ನಗರದ ವಿವಿಧ ಶಾಖೆಗಳ ಸಹಯೋಗದೊಂದಿಗೆ ಶ್ರೀ ಉಮಾಮಹೇಶ್ವರ ಕ್ಷೇತ್ರ ನಾರಂಪಾಡಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ  ಜಾಗರಣೆ, ಭಜನೆ, ಶಿವ ಪಂಚಾಕ್ಷರಿ ಜಪ, ಮೃತ್ಯುಂಜಯ ಜಪ, ಶಿವಾಷ್ಟೋತ್ತರ ಶತನಾಮನಿ ಪಠಣೆ, ಪುಷ್ಪಾರ್ಚನೆ , ಏಕಾದಶ ಯೋಗ ಶಿವ ನಮಸ್ಕಾರ ಕಾರ್ಯಕ್ರಮ ನಡೆಯಿತು.

ಡಾ.ಕೇಶವ ಭಟ್ ಮವ್ವಾರ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಬಾಲಕೃಷ್ಣ ಮಾಸ್ಟರ್  ಅಧ್ಯಕ್ಷರು, ಸೇವಾ ಸಮಿತಿ ಉಮಾಮಹೇಶ್ವರ ಕ್ಷೇತ್ರ ನಾರಂಪಾಡಿ,  ಹರಿನಾರಾಯಣ ಶಿರಂತಡ್ಕ ಕಾರ್ಯದರ್ಶಿ ಸೇವಾ ಸಮಿತಿ ಉಮಾಮಹೇಶ್ವರ ಕ್ಷೇತ್ರ ನಾರಂಪಾಡಿ ಹಾಗೂ ಕಾರ್ಯಕ್ರಮದ ಸಂಚಾಲಕರಾದ  ವಿಶ್ವನಾಥ ಅವರು ಉಪಸ್ಥಿತರಿದ್ದರು. ನಂತರ ಯೋಗಬಂಧುಗಳಿಂದ ಭಜನೆ, ಕುಣಿತ ಭಜನೆ, ಮೃತ್ಯುಂಜಯ ಜಪ ಮತ್ತು ಶಿವ ಪಂಚಾಕ್ಷರಿ  ಜಪದ ಜೊತೆಗೆ ಅದರ ಮಹತ್ವದ ಬಗ್ಗೆ ಬೌದ್ಧಿಕ್ ನ್ನೂ ನೀಡಲಾಯಿತು. ಶಿವರಾತ್ರಿ ಜಾಗರಣೆಯ ಮಹತ್ವವನ್ನು ಕೂಡ ತಿಳಿಸಿಕೊಡಲಾಯಿತು. ಶಿವಾಷ್ಟೋತ್ತರ ಶತನಾಮಾನಿ ಪಠಣೆಯೊಂದಿಗೆ ಪುಷ್ಪಾರ್ಚನೆ ಮಾಡಿದರು. ದೇವಸ್ಥಾನ ಸ್ಥಳ ಪುರಾಣ, ಶಿವರಾತ್ರಿಯ ಪುರಾಣ ಕಥೆಗಳನ್ನು ತಿಳಿದುಕೊಂಡು ಕ್ಷೇತ್ರಕ್ಕೆ ಏಕಾದಶ ಪ್ರದಕ್ಷಿಣೆ ಹಾಕಲಾಯಿತು.  ಪ್ರಾತಃ ಕಾಲದ ನಿತ್ಯಾಭ್ಯಾಸದ ಜೊತೆಗೆ ಏಕಾದಶ ಯೋಗ ಶಿವ ನಮಸ್ಕಾರವನ್ನು ಎಲ್ಲಾ ಯೋಗ ಬಂಧುಗಳು ಜೊತೆಯಾಗಿ ಮಾಡಿದರು. ನಳಿನಿ ಕಾರ್ಯಕ್ರಮ ನಿರೂಪಿಸಿದರು. ರವಿಶಂಕರ  ವಂದಿಸಿದರು. ಅನ್ನಪೂರ್ಣೇಶ್ವರಿ ಮಂತ್ರ ದೊಂದಿಗೆ ಪ್ರಸಾದ ಸೇವಿಸಿ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು. ತೊಂಭತ್ತಕ್ಕೂ ಅಧಿಕ ಯೋಗ ಬಂಧುಗಳು ಹಾಗೂ ಯೋಗೇತರ ಬಂಧುಗಳು ಮತ್ತು ಮಕ್ಕಳು ಭಾಗವಹಿಸಿದ್ದರು.

Post a Comment

0 Comments