ಪೆರ್ಲ : ವನ್ಯ ಜೀವಿಗಳ ಉಪಟಳ ನಿಯಂತ್ರಣಕ್ಕಾಗಿ ಜ್ಯಾರಿಗೆ ತಂದ ಹಾನರರಿ ವೈಲ್ಡ್ ಲೈಫ್ ವಾರ್ಡನ್ ಆದೇಶ ಉಪಯೋಗಿಸಿ ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಂದಿ ನಿಗ್ರಹಗೊಳಿಸಲಾಯಿತು. ಎಣ್ಮಕಜೆ ಗ್ರಾ.ಪಂ.ನಲ್ಲಿ ಅತ್ಯಧಿಕ ಕಾಡು ಹಂದಿಗಳ ಉಪಟಳ ಇರುವ 13ನೇ ವಾರ್ಡಿನಲ್ಲಿ ಶೂಟರ್ ಗಿರೀಶ್ ಎ ನಾಯರ್ ಅವರ ನೇತೃತ್ವದ ತಂಡವು ಕಾಡುಹಂದಿಯೊಂದಕ್ಕೆ ಗುಂಡು ಹಾರಿಸಿ ನಿಗ್ರಹಿಸಿದ್ದಾರೆ. ಈ ಸಂದರ್ಭ ಎಣ್ಮಕಜೆ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಹಾಗೂ 13ನೇ ವಾರ್ಡ್ ಸದಸ್ಯ ಶರತ್ಚಂದ್ರ ಶೆಟ್ಟಿ ಸ್ಥಳದಲ್ಲಿದ್ದರು.ಅರಣ್ಯ ಇಲಾಖೆಯ ಕಾಸರಗೋಡು ರೇಂಜ್ ಪರಪ್ಪ ವಿಭಾಗದ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

0 Comments