ಪೆರ್ಲ : ಎಲ್‌ಡಿಎಫ್ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ ಡಿ ಎಫ್ ಮಂಜೇಶ್ವರ ಮಂಡಲ ವತಿಯಿಂದ ಆಯೋಜಿಸಿದ ಅಭಿವೃದ್ಧಿ ಮುನ್ನಡೆ ಜಾಥಾ ಎಣ್ಮಕಜೆ ಪಂಚಾಯತಿನ ಕಾಟುಕುಕ್ಕೆಯಿಂದ ಆರಂಭಗೊಂಡಿತು. ಸಿಪಿಐ(ಎಂ) ಕಾಸರಗೋಡು ಜಿಲ್ಲಾ ಕಾರ್ಯದರ್ಶಿ, ಶಾಸಕ ಎಂ. ರಾಜಗೋಪಾಲನ್ ಜಾಥಾವನ್ನು ಉದ್ಘಾಟಿಸಿದರು. ಜಾಥಾ ಲೀಡರ್ ಕೆ.ಆರ್.ಜಯಾನಂದ, ಉಪ ಲೀಡರ್ ಸಿ.ಎ.ಸುಬೈರ್, ಜಾಥಾ ಮೆನೇಜರ್ ಜಯರಾಮ ಬಲ್ಲಂಗುಡೇಲು, ಜಾಥಾ ಪೈಲೆಟ್ ಅಹಮ್ಮದ್ ಆಲಿ, ಎಣ್ಮಕಜೆ, ಕಾಟುಕುಕ್ಕೆ ಲೋಕಲ್ ಸಮಿತಿ ಕಾರ್ಯದರ್ಶಿಗಳು, ಸದಸ್ಯರು, ಏರಿಯ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

0 Comments