Ticker

6/recent/ticker-posts

Ad Code

ನಾಳೆ ಪೆರ್ಲಕ್ಕೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವೆ ಚಿಂಜುರಾಣಿ


ಪೆರ್ಲ : ಪಶುಸಂಗೋಪನಾ ಇಲಾಖೆಯ ಪೆರ್ಲ ಪಶುರೋಗ ನಿಯಂತ್ರಣ ತಪಾಸಣಾ ಠಾಣೆಯ ನೂತನ ಸ್ಯಾಟಲೈಟ್ ಕಂಟೈನರ್ ಕಚೇರಿಯ ಉದ್ಘಾಟನೆಯನ್ನು  ಫೆ.19 (ನಾಳೆ) ಬೆಳಗ್ಗೆ 10 ಗಂಟೆಗೆ ಎಣ್ಮಕಜೆ ಗ್ರಾಮ ಪಂಚಾಯತಿನ ಸಭಾಂಗಣದಲ್ಲಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಸಚಿವರಾದ  ಜೆ. ಚಿಂಚುರಾಣಿ ಅವರು ನೆರವೇರಿಸಲಿದ್ದಾರೆ.ಮಂಜೇಶ್ವರ ಶಾಸಕರಾದ ಎ.ಕೆ.ಎಂ ಆಶ್ರಫ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಕಾಸರಗೋಡು ಸಂಸದರಾದ ರಾಜ್‌ಮೋಹನ್ ಉಣ್ಣಿತ್ತಾನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ,ಉಪಾಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್,ಜಿಲ್ಲಾ ಪಂಚಾಯತ್ ಸದಸ್ಯರಾದ ಸೋಮಶೇಖರ್ ಜೆ.ಎಸ್,ಬ್ಲೋಕ್ ಪಂಚಾಯತ್ ಸದಸ್ಯೆ ನಫೀಸತ್ ಮಿಶ್ರೀಯಾ,ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ರಮ್ಲಾ ಇಬ್ರಾಹಿಂ,ಎಣ್ಮಕಜೆ ಗ್ರಾಮ ಪಂಚಾಯತಿನ ಸದಸ್ಯರಾದ ಆಯಿಷತ್ ರಾಬೀಯಾ,ಕಾಸರಗೋಡು ಜಿಲ್ಲಾ ಚೀಪ್ ವೆಟರ್ನರಿ ಅಫೀಸರ್ ಡಾ.ಬಿಟ್ಟು ಜೋಸೆಫ್,ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾ ವಿನೋದ್ ವಿ(ಸಿ.ಪಿ.ಎಂ),ರಾಮಚಂದ್ರ ಎಂ(ಸಿ.ಪಿ.ಐ)ಬಿ.ಎಸ್ ಗಾಂಬೀರ (ಕಾಂಗ್ರೆಸ್) ರಮಾನಂದ ಎಡಮಲೆ(ಬಿ.ಜೆ.ಪಿ),ಎ.ಕೆ ಶೆರೀಫ್(ಮುಸ್ಲಿಂ ಲೀಗ್),ಎಣ್ಮಕಜೆ  ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಾನವಾಜ್,ಪೆರ್ಲ ವೆಟರ್ನರಿ ವೈದ್ಯರಾದ ಘನ ಶ್ಯಾಮ್ ಜೋಶಿ ಕೆ ಭಾಗವಹಿಸಲಿದ್ದಾರೆ.ಉದ್ಘಾಟನಾ ಸಮಾರಂಭದ ನಂತರ ಪ್ರಾಣಿಜನ್ಯ ರೋಗಗಳ (Zoonotic Diseases) ಕುರಿತು ವಿಚಾರ ಸಂಕಿರಣ ನಡೆಯಲಿದೆ. ವಿಚಾರ ಸಂಕಿರಣವನ್ನು ಕಾಸರಗೋಡು ಮೊಬೈಲ್ ಸರ್ಜರಿ ಯೂನಿಟ್ ನ  ವೆಟರ್ನರಿ ಸರ್ಜನ್ ಡಾ.ಸೂರ್ಯ ನಡೆಸಲಿದ್ದಾರೆ.

Post a Comment

0 Comments