Ticker

6/recent/ticker-posts

Ad Code

ಆನ್‌ಲೈನ್ ವ್ಯವಹಾರದ ಮೂಲಕ ಭಾರಿ ಲಾಭದ ಭರವಸೆ : 87ಲಕ್ಷದ 31ಸಾವಿರ ರೂ. ವಂಚನೆ ದೂರು:


ಕಾಸರಗೋಡು : ಆನ್‌ಲೈನ್ ವ್ಯವಹಾರದ ಮೂಲಕ ಭಾರಿ ಲಾಭದ ಭರವಸೆ ನೀಡಿ 87,31,000 ರೂ. ವಂಚನೆ ಮಾಡಿರುವ ಬಗ್ಗೆ ಕಾಸರಗೋಡು ಸೈಬರ್ ಪೊಲೀಸರಿಗೆ ದೂರು ಲಭಿಸಿದೆ. ವೆಳ್ಳರಿಕುಂಡ್‌ನ ತವಲಕುಂಡ್‌ನ ಜನಾರ್ದನನ್ ಎಂಬವರ ದೂರಿನ ಮೇರೆಗೆ ಕಾಸರಗೋಡು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಡಿಸೆಂಬರ್ 18, 2025 ರಿಂದ ಫೆಬ್ರವರಿ 16, 2026 ರವರೆಗೆ ಫೇಸ್‌ಬುಕ್ ಮತ್ತು ವಾಟ್ಸಾಪ್ ಮೂಲಕ ಭಾರಿ ಲಾಭದ ಭರವಸೆ ನೀಡಿ ಈ ವಂಚನೆ ಮಾಡಲಾಗಿದೆ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲವಾರು ಸಂದರ್ಭಗಳಲ್ಲಿ ವಿವಿಧ ಖಾತೆಗಳಿಗೆ 87,04,000 ರೂ.ಗಳನ್ನು ಕಳುಹಿಸಲಾಗಿದೆ. ಆ ನಂತರ ಖಾತೆಗೆ ಕೇವಲ 27,000 ರೂ.ಗಳನ್ನು ಮಾತ್ರ ಹಿಂತಿರುಗಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ  ಅದು ವಂಚನೆ ಎಂದು  ಅರಿವಾದಾಗ  ಸೈಬರ್ ಪೊಲೀಸರಿಗೆ ದೂರು ನೀಡಲಾಗಿತ್ತು.

Post a Comment

0 Comments