ಕೊಚ್ಚಿ : ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸಿದಂತೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಕೇರಳ ಭೇಟಿ ನೀಡಲಿದ್ದಾರೆ. ಮಾರ್ಚ್ 5 ಅಥವಾ 6ರಂದು ಪ್ರಧಾನಿ ಕೊಚ್ಚಿಗೆ ಆಗಮಿಸಲಿದ್ದಾರೆ. ರೈಲ್ವೆಗೆ ಸಂಬಂಧಿಸಿದ ನಾನಾ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸುವರು. ಮರೀನ್ ಡ್ರೈವ್‌ನಲ್ಲಿ 'ಅಖಿಲ ಕೇರಳ ಧೀವರ ಸಭಾ'ದ ಸುವರ್ಣ ಮಹೋತ್ಸವ ಆಚರಣೆಯನ್ನು ಉದ್ಘಾಟಿಸುವರು. ಎರ್ನಾಕುಳಂ ಜಿಲ್ಲೆಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎನ್ ಡಿಎ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ. ಕೊಚ್ಚಿ ಕೇಂದ್ರೀಕರಿಸಿ ಮಧ್ಯ ಕೇರಳದಲ್ಲಿ ಪಕ್ಷದ ಚಟುವಟಿಕೆಗಳನ್ನು ಸಂಘಟಿಸಲು ಎನ್ ಡಿಎ ಸೋಮವಾರ ತೃಕ್ಕಾಕರದಲ್ಲಿ ಹೊಸ ಕಚೇರಿಯನ್ನು ತೆರೆದಿದೆ. ಮಂಗಳವಾರ ತಿರುವನಂತಪುರದಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ನಾಯಕತ್ವ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆನ್‌ಲೈನ್‌ನಲ್ಲಿ ಭಾಗವಹಿಸುವರು. ಈ ಸಭೆಯ ಬಳಿಕ ಪ್ರಧಾನಿಯವರ ಕೇರಳ ಭೇಟಿಯ ಸಮಯವನ್ನು ಅಂತಿಮವಾಗಿ ನಿರ್ಧರಿಸಲಾಗುವುದು ಎಂದು ಪಕ್ಷದ ರಾಜ್ಯ ನಾಯಕತ್ವ ತಿಳಿಸಿದೆ. ಸಮ್ಮೇಳನವನ್ನು ತ್ರಿಪ್ಪುನಿತುರ ಅಥವಾ ತ್ರಿಶೂರ್ ಗೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ. ಧಾರ್ಮಿಕ ಮುಖಂಡರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ನಾಯಕರು ಸೂಚಿಸಿದ್ದಾರೆ.

0 Comments