Ticker

6/recent/ticker-posts

Ad Code

ಅಸೌಖ್ಯದಿಂದಿದ್ದ ಯುವಕ ಮೃತ್ಯು

 

ಬದಿಯಡ್ಕ: ಜನ್ಮತಾ  ಮೆದುಳಿನ ರಕ್ತನಾಳದ ಅಸೌಖ್ಯದಿಂದ ಬಳಲುತ್ತಿದ್ದು ಈ ನಡುವೆ ಶಸ್ತ್ರಚಿಕಿತ್ಸೆಗೊಳಪಟ್ಟು ವಿಶ್ರಾಂತಿ ಪಡೆಯುತ್ತಿದ್ದ ಯುವಕನೋರ್ವ  ಅನಾರೋಗ್ಯ ಉಲ್ಬಣಗೊಂಡು ಮೃತಪಟ್ಟ ಘಟನೆ ಪಳತ್ತಡ್ಕದಲ್ಲಿ ನಡೆದಿದೆ. ಪಳ್ಳತ್ತಡ್ಕದ ಮೊಹಮ್ಮದ್ ಕುಂಞಿ ಮತ್ತು ದೈನಾಬಿ ದಂಪತಿಯ ಪುತ್ರ ರಿಷಾದ್ (21) ನಿಧನರಾದರು. ಅನಾರೋಗ್ಯದ ನಂತರ ಮಂಗಳೂರು ಮತ್ತು ತಲಶ್ಶೇರಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ತಂದೆ ಮೊಹಮ್ಮದ್ ಕುಂಞಿ ವಿದೇಶದಲ್ಲಿ ಕೆಲಸ ಮಾಡಿ ಗಳಿಸಿದ ಹಣವನ್ನು ಮತ್ತು ಸ್ಥಳೀಯರ ಸಹಾಯದಿಂದ ಸಂಗ್ರಹಿಸಿ  ಲಕ್ಷಗಟ್ಟಲೆ ಹಣ ಚಿಕಿತ್ಸೆಗೆ ಖರ್ಚು ಮಾಡಿದ್ದರು,  ತಲಶ್ಶೇರಿಯ ಅಮೃತ ವೈದ್ಯಕೀಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅನಾರೋಗ್ಯ ಉಲ್ಬಣಗೊಂಡ ನಂತರ ನಿನ್ನೆ ಅವರನ್ನು ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಾವು ಸಂಭವಿಸಿದೆ. ಮೃತರು ತಂದೆ ತಾಯಿಗಳಲ್ಲದೆ ಸಹೋದರಿಯರಾದ  ಸಹನಾ, ರಿಜ್ವಾನಾ ಮತ್ತು ರಿಫಾನಾ ಎಂಬಿವರನ್ನಗಲಿದ್ದಾರೆ.

Post a Comment

0 Comments