Ticker

6/recent/ticker-posts

Ad Code

ಕಾಸರಗೋಡಿನಲ್ಲಿ ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರದ ದ್ವಿದಿನ ಸಂಕೀರ್ತನಾ ಆರಾಧನೋತ್ಸವ

 

ಕಾಸರಗೋಡು : ಶ್ರೀ ಪುರಂದರದಾಸ ಸಂಗೀತ ಕಲಾ ಮಂದಿರದ 22ನೇ “ದ್ವಿದಿನ ಸಂಕೀರ್ತನಾ ಆರಾಧನೋತ್ಸವ”ವು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಜರಗಿತು. ಸಂಗೀತ ವಿದ್ವಾನ್ ಶ್ರೀ ರಮಣ ಮಾಸ್ಟರ್ ಅವರ ಶುಭಾನುಗ್ರಹ ಹಾಗೂ ಶತಾಯುಷಿ ಮೃದಂಗ ವಿದ್ವಾನ್ ಬಾಬು ರೈ ಇವರ ಶುಭಾಶೀರ್ವಾದಗಳೊಂದಿಗೆ ಸಂಸ್ಥೆಯ ಸ್ಥಾಪಕರೂ ರೂವಾರಿಗಳೂ ಆದ ಕಲ್ಮಾಡಿ ಸದಾಶಿವ ಆಚಾರ್ಯ, ಕ್ಷೇತ್ರ ಸಮಿತಿ ಮುಖ್ಯಸ್ಥ ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ, ಕನ್ನಡ ಭವನದ ರೂವಾರಿ ಡಾ| ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮನಮೋಹನ ಕೆರೆಮನೆ, ಪ್ರಜಿತ್, ಶ್ರೀಧರ್ ಭಟ್, ಬಾಲರಾಜ್ ಉಪಸ್ಥಿತರಿದ್ದರು. ಬಳಿಕ ಸಂಗೀತ ವಿದ್ವಾಂಸರುಗಳಿಂದ ಸಂಗೀತ ಕಾರ್ಯಕ್ರಮ ಚಾಲನೆಗೊಂಡಿತು.

Post a Comment

0 Comments