ಕಾಸರಗೋಡು: ರಾಜ್ಯದಲ್ಲಿ ಯುಡಿಎಫ್ ಅಧಿಕಾರಕ್ಕೆ ಬಂದರೆ, ಕಾಸರಗೋಡು ಜಿಲ್ಲೆಯ ಆರೋಗ್ಯ ರಂಗದ ಸಮಸ್ಯೆಯನ್ನು ಪರಿಹರಿಸಲು ಮೊದಲ ಪರಿಗಣನೆ ನೀಡುವುದಾಗಿ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಭರವಸೆ ನೀಡಿದ್ದಾರೆ. ಜತೆಗೆ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲಾಗುವುದು. ಸಾಂಪ್ರದಾಯಿಕ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಜಿಲ್ಲೆ ಮುನ್ನಡೆಯಲು ಅವಕಾಶಗಳನ್ನು ಸೃಷ್ಟಿಸಲಾಗುವುದು ಎಂದು ಸತೀಶನ್ ಹೇಳಿದರು. ನವಯುಗ ಯಾತ್ರೆಯ ಅಂಗವಾಗಿ ಆಯೋಜಿಸಲಾದ "ಸಂವಹರಿಸೋಣ ನವಯುಗದ ಸೃಷ್ಠಿಗೆ" ಎಂಬ ಕಾರ್ಯಕ್ರಮದಲ್ಲಿ ಅವರು ಜಿಲ್ಲೆಯ ಪ್ರಮುಖ ವ್ಯಕ್ತಿ ಮತ್ತು ಸಂಘಟನಾ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಭಾಷಾ ಅಲ್ಪಸಂಖ್ಯಾತರು, ಎಂಡೋಸಲ್ಫಾನ್ ಸಂತ್ರಸ್ತರು, ಏಮ್ಸ್ ಸಂಘ, ವ್ಯಾಪಾರಿಗಳು, ವಾಣಿಜ್ಯ ಮಂಡಳಿಗಳು, ಬಸ್ ನಿರ್ವಾಹಕರು, ಗುತ್ತಿಗೆದಾರರು, ಖಾದಿ ಮತ್ತು ಕೈಮಗ್ಗ ಕಾರ್ಮಿಕರು, ಪ್ರವಾಸ ನಿರ್ವಾಹಕರು ಸೇರಿದಂತೆ ಇಪ್ಪತ್ತೈದಕ್ಕೂ ಹೆಚ್ಚು ಸಂಘಟನೆಗಳು ಮತ್ತು ವಿವಿಧ ಕಾರ್ಮಿಕ ವಿಭಾಗಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

0 Comments