Ticker

6/recent/ticker-posts

Ad Code

ಎಂಟು ವರ್ಷದ ಮಗಳೊಂದಿಗೆ ಆಸ್ಪತ್ರೆಗೆಂದು ತೆರಳಿದ ಮಹಿಳೆ ನಾಪತ್ತೆ

ಕಾಂಞಂಗಾಡು: ಎಂಟು ವರ್ಷದ ಮಗಳೊಂದಿಗೆ ಆಸ್ಪತ್ರೆಗೆ ತೆರಳಿದ್ದ ಮಹಿಳೆಯೋರ್ವರು ನಾಪತ್ತೆಯಾಗಿದ್ದಾರೆ. ಹೊಸದುರ್ಗ ಸಮೀಪದ ಕುಶಾಲ್ ನಗರದ ಆಯಿಷತುಲ್ ಸಫೂರಾ (32) ಮತ್ತು ಆಕೆಯ ಮಗಳು ನಾಪತ್ತೆಯಾಗಿದ್ದಾರೆ. ಆಕೆಯ ತಾಯಿ ಕೆ.ಪಿ. ರಹಮಾಬಿ ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಯಿಷತುಲ್ ಸಫೂರಾ ಭಾನುವಾರ ಸಂಜೆ ಮಗಳೊಂದಿಗೆ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ತಡರಾತ್ರಿಯಾದರೂ ಆಕೆ ಹಿಂತಿರುಗದ ಕಾರಣ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು.

Post a Comment

0 Comments