Ticker

6/recent/ticker-posts

Ad Code

ಕೆನಡಾದಲ್ಲಿ ಗುಂಡಿಕ್ಕಿ ಕನ್ನಡಿಗನ ಬರ್ಬರ ಹತ್ಯೆ

 

ನೆಲಮಂಗಲ: ಕೆನಡಾದಲ್ಲಿ ಕನ್ನಡಿಗನೋರ್ವನನ್ನು ಬರ್ಬರ ಹತ್ಯೆ  ಮಾಡಲಾಗಿದೆ. ಕರ್ನಾಟಕ ಮೂಲದ ನೆಲಮಂಗಲ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್(37) ಕಾರಿನಲ್ಲಿ ತೆರಳುತ್ತಿದ್ದಾಗ ಹತ್ತಾರು ಬಾರಿ ಗುಂಡಿನ ದಾಳಿ ನಡೆಸಿ ಹತ್ಯೆ ನಡೆದಿದೆ. ತ್ಯಾಮಗೊಂಡ್ಲು ನಿವಾಸಿ ನಿವೃತ್ತ ಶಿಕ್ಷಕ ನಂದಕುಮಾರ್ ಅವರ ಪುತ್ರನಾದ ಚಂದನ್‌ ಕುಮಾರ್‌ 6 ವರ್ಷದಿಂದ  ಕೆನಡಾದಲ್ಲಿದ್ದ ಎಲ್‌ಎನ್‌ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಚಂದನ್ ತನ್ನ ಕೆಲಸದ ಜೊತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲಿ ಹರಡುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲಸವನ್ನರಸಿ ಕೆನಡಾಗೆ ಹೋದ ಭಾರತೀಯರಿಗೆ, ಅದರಲ್ಲಿಯೂ ಕನ್ನಡಿಗರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಕನ್ನಡಿಗರಿಗಾಗಿ ಸಂಘಟನೆಗಳ ಮುಖಾಂತರ ಅಗತ್ಯ ಸೇವೆಗಳನ್ನೂ ಒದಗಿಸುತ್ತಿದ್ದರೆಂದು ತಿಳಿದು ಬಂದಿದೆ. ಚಂದನ್‌ ಅವರ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ರಾತ್ರಿ 8 ಗಂಟೆಗೆ ಚಂದನ್‌ ಮೃತಪಟ್ಟಿದ್ದಾನೆ ಎಂಬ ಸುದ್ದಿ ಪೋಷಕರಿಗೆ  ಟೊರೊಂಟೋ ಪೊಲೀಸರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮೃತ ಚಂದನ್ ತಂದೆ 'ಮೊನ್ನೆ ಶುಕ್ರವಾರ ಕಡೆಯದಾಗಿ ಮಾತನಾಡಿದ್ದ. ಹುಡುಗಿಯನ್ನು ನೋಡಿ ಮದುವೆ ಮಾಡುವ ಆಸೆ ಇತ್ತು. ಕೆಲಸದಿಂದ ರಜೆ ಪಡೆದು ಬರುತ್ತೇನೆ ಎಂದಿದ್ದ. ನನಗೆ ಏನು ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ' ಎಂದು  ಪ್ರತಿಕ್ರಿಯಿಸಿದ್ದು ಮಗನ ಮೃತ ದೇಹ  ಮನೆಗೆ ಕರೆ ತರುವ ಬಗ್ಗೆಅವರು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

Post a Comment

0 Comments