ಬದಿಯಡ್ಕ : ಕೊಲ್ಲಂಗಾನ ಗಾಂಧಿನಗರ ನವರಂಗ್ ಆರ್ಟ್ಸ್‌ನ ಸುವರ್ಣ ವರ್ಷಾಚರಣೆಯ ಸಂದರ್ಭದಲ್ಲಿ ಶಿಥಿಲಾವಸ್ಥೆಯಲ್ಲಿರುವ ರಂಗಮಂದಿರ-ಬಣ್ಣದ ಮನೆಯ ಪುನರ್‌ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಫೆ.15ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕೊಲ್ಲಂಗಾನದ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ನಾವಡ ಓಣಿಕುಂಡು ಅವರು ಆಮಂತ್ರಣ ಪತ್ರವನ್ನು ಹಿರಿಯ ಸದಸ್ಯ ಪ್ರೊ.ಶ್ರೀನಾಥ್ ಕಾಸರಗೋಡು ಅವರಿಗೆ ನೀಡಿ ಬಿಡುಗಡೆಗೊಳಿಸಿದರು. ಗೌರವಾಧ್ಯಕ್ಷ ಪಿ. ಕಿಶೋರ್ ಚಂದ್ರ ರೈ, ಅಧ್ಯಕ್ಷ ಉದಯ ಆಚಾರ್ಯ, ಕಾರ್ಯದರ್ಶಿ ರವಿಶಂಕರ ಶೆಟ್ಟಿ, ಕೋಶಾಧಿಕಾರಿ ಹರೀಶ ಕೊಲ್ಲಂಗಾನ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ರೈ ಕೊಲ್ಲಂಗಾನ, ಲವ ಆಚಾರ್ಯ, ಮನೋಜ್ ಕುಮಾರ್ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಜೊತೆಗಿದ್ದರು. ಫೆ.15ರಂದು ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಇವರಿಂದ ಶಿಲಾನ್ಯಾಸ ನಡೆಯಲಿದೆ.

0 Comments