ಏತಡ್ಕ : ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ 14ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ವೇದಮೂರ್ತಿ ಪಳ್ಳತ್ತಡ್ಕ ಶ್ರೀ ಶಿವಶಂಕರ ಭಟ್ಟರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಫೆ.10ಕ್ಕೆ ಜರಗಲಿರುವುದು. ಅಂದು ಸಂಜೆ 5ರಿಂದ ಭಜನೆ, ಸಂಜೆ 6ರಿಂದ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ಸಂಜೆ 6.30ರಿಂದ ಶ್ರೀ ದುರ್ಗಾ ಕುಣಿತ ಭಜನಾ ಸಂಘ, ಏತಡ್ಕ ಇವರಿಂದ ಕುಣಿತ ಭಜನೆ ಜರಗಲಿದೆ.
ರಾತ್ರಿ 7.30ರಿಂದ ಪ್ರಕಾಶ್ ಆಚಾರ್ಯ ಕುಂಟಾರು ಹಾಗೂ ಶಿಷ್ಯರಿಂದ ಸಂಗೀತ ಸೌರಭ ಕಾರ್ಯಕ್ರಮ ಜರಗಲಿದೆ. ರಾತ್ರಿ 8.30ರಿಂದ ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರಗಲಿದೆ. ಸಾಂಸ್ಕೃತಿಕ ಕಾರ್ಯುಕ್ರಮದಂಗವಾಗಿ ರಾತ್ರಿ 9.30ರಿಂದ ದುರ್ಗಾ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಶಾರದ ಆರ್ಟ್ಸ್ ಕಲಾವಿದೆರ್ ಮಂಜೇಶ್ವರದ 'ಕಥೆ ಎಡ್ಡೆ ಉಂಡು' ನಾಟಕ ಪ್ರದರ್ಶನಗೊಳ್ಳಲಿದೆ.
.jpeg)
0 Comments