ವಿಟ್ಲ : ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರಿಗೆ ದೆಹಲಿ ಕರ್ನಾಟಕ ಸಂಘದ ಡಾ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನಿಸಲಾಯಿತು. ಡಾ: ಹಂಪ ನಾಗರಾಜಯ್ಯ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿಗಳಾದ ಪ್ರಧಾನ ಗುರುದತ್ತ, ಬಿ ಆರ್ ಲಕ್ಷ್ಮಣರಾವ್, ಡಾ: ಲತಾ ರಾಜಶೇಖರ್, ಚಲನ ಚಿತ್ರ ನಿರ್ದೇಶಕ ಡಾ: ಟಿ.ಎಸ್. ನಾಗಾಭರಣ, ಚಲನಚಿತ್ರ ನಟ ಚರಣ್ ರಾಜ್ , ಸಂಪಾದಕ ವಿಶ್ವೇಶರ ಭಟ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ ಯಂ ನಾಗರಾಜ್, ಉಪಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷೆ ಪೂಜಾ ರಾವ್ , ಕಾರ್ಯದರ್ಶಿ ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

0 Comments