Ticker

6/recent/ticker-posts

Ad Code

ಅಡ್ಕಸ್ಥಳ ಹೊಳೆಯಲ್ಲಿ ತ್ಯಾಜ್ಯ ಸೃಷ್ಠಿಸುತ್ತಿದ್ದ ಅಲೆಮಾರಿಗಳಿಗೆ ಪರಿಸರ ಜಾಗೃತಿಯ ಪಾಠ ಬೋಧಿಸಿ ಕಾರ್ಯಚರಣೆ

 


ಪೆರ್ಲ :  ಕರ್ನಾಟಕದ ಅಲೆಮಾರಿ ತಂಡವೊಂದು ಕಳೆದ ಕೆಲವು ದಿನಗಳಿಂದ ಅಡ್ಕಸ್ಥಳ ಹೊಳೆಯಲ್ಲಿ ಬೀಡು ಬಿಟ್ಟಿದ್ದು ಜಲ ಮಲೀನಗೊಳಿಸಿ ಮೀನು ಹಿಡಿಯುವ ಕಾರ್ಯದ ಸಹಿತ ತೆರೆದ ಸ್ಥಳದಲ್ಲಿ ಮಾಲಿನ್ಯ ಸೃಷ್ಟಿಸುತ್ತಿದ್ದ ಇವರನ್ನು ಪರಿಸರ ಜಾಗೃತಿ ಮೂಡಿಸಿ ತೆರವುಗೊಳಿಸಲು ಪಂ.ಅಧಿಕೃತರು ನಿರ್ದೇಶಿಸಿದ್ದಾರೆ.  ಈ ಬಗ್ಗೆ ಸ್ಥಳೀಯರು ಪಂಚಾಯತಿಗೆ ದೂರಿದ ಬಗ್ಗೆ ಹೆಲ್ತ್ ಇನ್ಸ್ ಪೆಕ್ಟರ್ ಬಾಬುರಾಜ್ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆಗೈದರು. ಬಳಿಕ ಪರಿಸರವನ್ನು ಹಾಳುಗೆಡವುದರ ತ್ಯಾಜ್ಯ ಉಪೇಕ್ಷೆಯ ಬಗ್ಗೆ ಜಾಗೃತಿಯ ಪಾಠ ಬೋಧಿಸಿ ಪರಿಸರ ಸ್ವಚ್ಛತೆಯ ಜತೆಗೆ ಆರೋಗ್ಯ ಶುಚಿತ್ವಕ್ಕೂ ಗಮನಹರಿಸಲು ಸೂಚಿಸಲಾಯಿತು.

Post a Comment

0 Comments