Ticker

6/recent/ticker-posts

Ad Code

ಮಾ.22, 23ಕ್ಕೆ ಬೆಳಿಂಜ ಶ್ರೀ ಪೂಮಾಣಿ ಕಿನ್ನಿಮಾಣಿ ಯುವಕೇಂದ್ರದ 44ನೇ ವಾರ್ಷಿಕೋತ್ಸವ

    

ಬದಿಯಡ್ಕ : ಬೆಳಿಂಜ ಶ್ರೀ ಪೂಮಾಣಿ ಕಿನ್ನಿಮಾಣಿ ಯುವಕೇಂದ್ರದ 44ನೇ ವಾರ್ಷಿಕೋತ್ಸವ ಶ್ರೀ ಪೂಮಾಣಿ ಕಿನ್ನಿಮಾಣಿ ಮಾಡದ ಜಾತ್ರೋತ್ಸವದ ಸುಸಂದರ್ಭದಲ್ಲಿ ಮಾ.22 ಹಾಗೂ 23ಕ್ಕೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರ ಅಂಗವಾಗಿ ಮಾ.22ರಂದು ಬೆಳಗ್ಗೆ 8.30 ಕ್ಕೆ ದೀಪ ಪ್ರಜ್ವಲನೆ, 9ರಿಂದ : ಭಜನೆ ಶ್ರೀ ಮಹಾವಿಷ್ಣು ಭಜನಾ ಸಂಘ ಆಲಿಂಜ, 10.30 ರಿಂದ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಅಪರಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ಜರಗಲಿದೆ. ಮಾರ್ಚ್ 23 ಸೋಮವಾರ ಸಾಯಂ ಗಂಟೆ 6.30 ಕ್ಕೆ ನೃತ್ಯ ವೈವಿದ್ಯ, ರಾತ್ರಿ 8.00 ರಿಂದ  ಸಭಾಕಾರ್ಯಕ್ರಮ, ರಾತ್ರಿ 10.00 ಕ್ಕೆ: ಅನ್ನಪ್ರಸಾದ, 10.30ರಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಕಲಾ ಮಂಡಳಿ ಸುಬ್ರಹ್ಮಣ್ಯ ಇವರಿಂದ 'ಗುಳಿಗ-ಶಿವಗುಳಿಗ' ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Post a Comment

0 Comments