Ticker

6/recent/ticker-posts

Ad Code

ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿಡಲು ಮುಸ್ಲಿಂ ಲೀಗ್ ನಾಯಕತ್ವ ಮುಂದಾಗಬೇಕು : ಬಿಜೆಪಿ

 ​

ಬದಿಯಡ್ಕ : ಮಾದಕ ವ್ಯಸನಿಗಳಾದ ಮುಸ್ಲಿಂ ಲೀಗ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಸತತವಾಗಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ತನ್ನ ಪಕ್ಷದ ಕಾರ್ಯಕರ್ತರನ್ನು ಮತ್ತು ಬೆಂಬಲಿಗರನ್ನು ಹದ್ದುಬಸ್ತಿನಲ್ಲಿಡಲು ಲೀಗ್ ನಾಯಕತ್ವ ಸಿದ್ಧವಾಗಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಲೀಗ್ ನಾಯಕತ್ವವೇ ನೇರ ಹೊಣೆಯಾಗಲಿದೆ ಎಂದು ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷರಾದ ಎಂ. ಗೋಪಾಲಕೃಷ್ಣ ಹೇಳಿದರು.

ಬದಿಯಡ್ಕ ಮತ್ತು ಸುತ್ತಮುತ್ತಲಿನ ತಳ್ಳುಗಾಡಿ ಫಾಸ್ಟ್ ಫುಡ್ ಕೇಂದ್ರಗಳು ಹಾಗೂ ಸಣ್ಣ ಪುಟ್ಟ ಅಂಗಡಿಗಳನ್ನು ಕೇಂದ್ರೀಕರಿಸಿಕೊಂಡು ಇಂತಹ ಮಾದಕ ದ್ರವ್ಯ ಸಂಘಟನೆಗಳ ಚಟುವಟಿಕೆಗಳು ಅವಿರತವಾಗಿ ನಡೆಯುತ್ತಿವೆ. ಎರಡು ದಿನಗಳ ಹಿಂದೆಯೂ ಬದಿಯಡ್ಕದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಇನ್ನು ಮುಂದೆ ಇಂತಹ ದೌರ್ಜನ್ಯಗಳನ್ನು ಸಹಿಸುವುದಿಲ್ಲ ಮತ್ತು ಪಕ್ಷದ ಕಾರ್ಯಕರ್ತರನ್ನು ರಕ್ಷಿಸಲು ಬಿಜೆಪಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Post a Comment

0 Comments