Ticker

6/recent/ticker-posts

Ad Code

ಮಾ. 21ಕ್ಕೆ ಬಾಯಾರು ಬೊಳ್ಳಿಮಲೆ ಶ್ರೀ ಶಕ್ತಿಪೀಠಂ ವಾರ್ಷಿಕ ಮಹೋತ್ಸವ

ಬಾಯಾರು : ಶ್ರೀ ಕ್ಷೇತ್ರ ಬೊಳ್ಳಿಮಲೆ (ಏಕಜಾತಿ ಧರ್ಮಪೀಠ) ಶ್ರೀ ಶಕ್ತಿಪೀಠಂನ ವಾರ್ಷಿಕ ಮಹೋತ್ಸವ ಮಾ.21ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಇದರ ಅಂಗವಾಗಿ ಮಾ.21ಕ್ಕೆ  ಪ್ರಾತಃಕಾಲ ಗಂಟೆ 6ರಿಂದ ಗಣಪತಿ ಹೋಮ, ಗುರುಪೂಜೆ, ಶ್ರೀ ಶಕ್ತಿದುರ್ಗಾಮಹಾಕಾಳಿ ಅಮ್ಮನವರ ಉದಯ ಪೂಜೆ, ಪ್ರಸಾದ ವಿತರಣೆ,  ಬೆಳಗ್ಗೆ ಗಂಟೆ 9 ರಿಂದ ವಿವಿಧ ಭಜನಾ ತಂಡದಿಂದ ಭಜನೆ ಪ್ರಾರಂಭ,  ಮಾತೃಶ್ರೀ ಶಾರದಾ ಸ್ಥಾನದಮನೆ ಇವರಿಂದ ದೀಪ ಪ್ರಜ್ವಲನೆ, ಮದ್ಯಾಹ್ನ ಗಂಟೆ 12:30ರಿಂದ ಹೂವಿನ ಪೂಜೆ, ಅಲಂಕಾರ ಪೂಜೆ, ಕುಂಕುಮಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ ಪ್ರಸಾದ ವಿತರಣೆ, ಅನ್ನಪ್ರಸಾದ ಬೋಜನ. ಸಂಜೆ ಗಂಟೆ 5ರಿಂದ ಮನು ವಾಂತಿಚ್ಚಾಲ್ ವಿರಚಿತ ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ಪದ್ಯ ರಚನೆಯ 'ಚಿರಂಜಿವಿ ಯಕ್ಷಗಾನ ಕಲಾ ಸಂಘ' ಕುಂಟಾಲುಮೂಲೆ ಇವರಿಂದ 'ಈರ್ವೆರ್ ಸತ್ಯೊಲು' ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ 6 ರಿಂದ ಸಂಧ್ಯಾ ದೀಪಾರಾಧನೆ, ಭಜನೆಯ ಮಂಗಳಾರತಿ ರಾತ್ರಿ ಗಂಟೆ: 8ರಿಂದ ಶ್ರೀ ದುರ್ಗಾಮಹಾಕಾಳಿ ಅಮ್ಮನವರ ವಿಶೇಷ ಹೂವಿನ ಪೂಜೆ, ಅಲಂಕಾರ ಪೂಜೆ, ಕುಂಕುಮಾರ್ಚನೆ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ರಾತ್ರಿ ಗಂಟೆ: 8-30ರಿಂದ ಕೊರಗತನಿಯ ದೈವದ ಭಂಡಾರ ಇಳಿಯುವುದು, ಅನ್ನಸಂತರ್ಪಣೆ, ಕೊರಗತನಿಯ ದೈವದ ಜೋಡು ಕೋಲ, ಕರಿಬೂಳ್ಯ ವಿತರಣೆಯೊಂದಿಗೆ ಉತ್ಸವ ಸಮಾಪ್ತಿಗೊಳ್ಳಲಿದೆ.

Post a Comment

0 Comments