ಪೆರ್ಲ : ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಮಾನವ ಸೇವೆಯ ದಿವ್ಯ ಪ್ರೇರಣೆಯ 100ನೇ ಜನ್ಮ ಶತಮಾನೋತ್ಸವ ಸಂಭ್ರಮದಂಗವಾಗಿ ನಾಡಿನಾದ್ಯಂತ ಸಂಚರಿಸುತ್ತಿರುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ ಪೆರ್ಲಕ್ಕೆ ತಲುಪಿದಾಗ ಉಜ್ವಲ ಸ್ವಾಗತ ಕೋರಲಾಯಿತು. ಶ್ರೀ ಸತ್ಯಸಾಯಿ ಸೇವಾಸಮಿತಿ, ಪೆರ್ಲ ಘಟಕದ ವತಿಯಿಂದ ರಥ ಯಾತ್ರೆಯು ಪೆರ್ಲ ಪೇಟೆಯ ರಾಜ ರಸ್ತೆಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಕೆ.ಕೆ. ರಸ್ತೆಯಲ್ಲಿರುವ "ಗುಲಾಬಿ ನಿವಾಸ"ಕ್ಕೆ ಆಗಮಿಸಿತು.
ಬಳಿಕ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಪಾದುಕೆ ದರ್ಶನ, ನಾಮ ಸಂಕೀರ್ತನೆ, ಸತ್ಸಂಗ ಮೊದಲಾದ ಕಾರ್ಯಕ್ರಮಗಳು ಜರಗಿದವು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಸೋಮಶೇಖರ್ ಜೆ ಎಸ್ , ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪೆಲ್ತಾಜೆ ಕಾಸರಗೋಡು ಸತ್ಯಸೇವಾ ಸಮಿತಿಯ ಅಧ್ಯಕ್ಷರಾದ ಹಿರಣ್ಯ ಮಹಾಲಿಂಗ ಭಟ್, ಶಿರಂತಡ್ಕ ವಾಸುದೇವ ಭಟ್ ನಿವೃತ್ತ ಅಧ್ಯಾಪಕ, ಸಾಹಿತಿ, ಪೆರ್ಲ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸಂಚಾಲಕ ಸತ್ಯನಾರಾಯಣ ಹೆಗ್ಡೆ, ಯೋಗೀಶ್ ಖಂಡೇರಿ ಕಾಟುಕುಕ್ಕೆ ಸಮಿತಿ, ಡಾ. ಕೃಷ್ಣ ಮೋಹನ, ಸತ್ಯನಾರಾಯಣ ಮತ್ತು ಟಿ. ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

.jpeg)
0 Comments