ಬೆಳ್ಳೂರು : ಜಿ. ಹೆಚ್. ಎಸ್, ಎಸ್ ಬೆಳ್ಳೂರಿನಲ್ಲಿ ಬಂಟ ಮಹಿಳಾ ಸಂಘ ಬೆಳ್ಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಕಾಸರಗೋಡು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇವರುಗಳ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಡಾ ವಿದ್ಯಾ ಮೋಹನ್ ದಾಸ್ ರೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಜದ ಗುತ್ತು ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ಳೂರು ಬಂಟರ ಸಂಘದ ಅಧ್ಯಕ್ಷರಾದ ಮನಮೋಹನ್ ರೈ ಪಿಂಡಗ ಮುಖ್ಯ ಅತಿಥಿಗಳಾಗಿದ್ದರು, ಪ್ರಸಾದ್ ನೇತ್ರಾಲಯ ಕಾಸರಗೋಡಿನ ಸಾರ್ವಜನಿಕ ಸಂಪರ್ಕಾಧಿಕಾರಿ ಮನೋಜ್ ಪ್ರಸ್ತಾವನೆಗೈದರು. ಡಾ ಆಶಿಕ್ ಹಾಗೂ ವೈದ್ಯಕೀಯ ತಂಡ ಉಪಸ್ಥಿತರಿದ್ದರು. ಉಜ್ವಲಾ ಆರ್ ಶೆಟ್ಟಿ ಪ್ರಾರ್ಥನೆ ಗೈದರು. ಪೂರ್ಣಿಮಾ ಜಯರಾಜ್ ರೈ ವಂದಿಸಿ, ಲತಾ ಸುಂದರ ರಾಜ್ ರೈ ನಿರೂಪಿಸಿದರು. ಹಲವರು ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.

0 Comments