ಪೆರ್ಲ : ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಎಣ್ಮಕಜೆ ಪಂಚಾಯತ್‌ನ ವಿವಿದೆಡೆಗಳಲ್ಲಿ ಸಂಚರಿಸಿ ಮತದಾರರನ್ನು ನೇರವಾಗಿ ಕಂಡು ಮತ ಯಾಚನೆ ನಡೆಸಿದರು. ಬೆಳಿಗ್ಗೆ ಬಜಕೂಡ್ಲು ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಎಣ್ಮಕಜೆಯಲ್ಲಿ ಸುರೇಂದ್ರನ್ ಪ್ರವಾಸ ಆರಂಭವಾಯಿತು. ಬಳಿಕ ಅವರು ಸಾಯಿ ಗ್ರಾಮ,ಬೆಂಗಪದವಿನಲ್ಲಿ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ಮತ ಯಾಚಿಸಿದರು.
ಕುರೆಡ್ಕ ಎಸ್‌ಟಿ ಉನ್ನತಿಯನ್ನೂ ತಲುಪಿದರು. ಪೆರ್ಲ ಮತ್ತು ಶಿವಗಿರಿಯಲ್ಲಿ ಮತದಾರರನ್ನು ಅವರು ಖುದ್ದಾಗಿ ಭೇಟಿ ಮಾಡಿದರು. ಪೆರ್ಲದ ನಲಂದ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಭೆಯನ್ನು ಕೆ. ಸುರೇಂದ್ರನ್ ಉದ್ಘಾಟಿಸಿದರು. ಸರ್ಪಮಲೆಯಲ್ಲಿ ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿದ ನಂತರ, ಬಾಕಿಲಪದವಿನಲ್ಲಿ ನಡೆದ ಕುಟುಂಬ ಸಭೆಯನ್ನು ಉದ್ಘಾಟಿಸಿದರು.
ಬಜಕೂಡ್ಲು ಸಮುದಾಯ ಸಭೆ ಮತ್ತು ಗುರಿನೆರೋಳು ಕುಟುಂಬ ಸಭೆಯಲ್ಲಿ ಭಾಗವಹಿಸಿದ್ದ ಕೆ. ಸುರೇಂದ್ರನ್ ಬಳಿಕ ಪಂಚಾಯತ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

.jpeg)

0 Comments