Ticker

6/recent/ticker-posts

Ad Code

ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಯುವ ಪ್ರತಿಭೆ ಶಮಾ ವಳಕುಂಜ ಆಯ್ಕೆ


ಬದಿಯಡ್ಕ : ಕರ್ನಾಟಕ ರಾಜ್ಯ ಸರಕಾರದ ಆದೀನದಲ್ಲಿರುವ ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿಯ 2025 - 26ನೇ ಸಾಲಿನ ಶಿಷ್ಯವೇತನಕ್ಕೆ ಕುಮಾರಿ ಶಮಾ ವಳಕುಂಜ ಆಯ್ಕೆಯಾಗಿರುತ್ತಾಳೆ. ಪುತ್ತೂರಿನ ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ಶಿಷ್ಯೆಯಾಗಿರುವ ಈಕೆ ಕಳೆದ 12 ವರ್ಷಗಳಿಂದ ಭರತನಾಟ್ಯ ಶಾಸ್ತ್ರೀಯ ನೃತ್ಯ ಅಭ್ಯಾಸದಲ್ಲಿ ತೊಡಗಿದ್ದಾಳೆ.ಹಲವೆಡೆಗಳಲ್ಲಿ ತನ್ನ ವಿದ್ವತ್ಪೂರ್ಣ ನೃತ್ಯ ಪ್ರದರ್ಶನಗಳನ್ನು ನೀಡಿ ಜನ ಮನ ರಂಜಿಸಿದ್ದಾಳೆ.  ದೇಶೀಯ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾಳೆ.

ಕಾಸರಗೋಡು ಬ್ಲೋಕ್ ಪಂಚಾಯತ್ ಸದಸ್ಯ,ಧಾರ್ಮಿಕ‌ ಮುಂದಾಳು  ಮಹೇಶ್ ವಳಕುಂಜ ಹಾಗೂ ಶಿಕ್ಷಕಿ ಶಾಲಿನಿ ದಂಪತಿಗಳ ಪುತ್ರಿಯಾದ ಈಕೆ  ಪುತ್ತೂರಿನ ಅಂಬಿಕಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.ಈಕೆಯ ಸಾಧನೆಗೆ ವೈಷ್ಣವೀ ನಾಟ್ಯಾಲಯದ ತಂಡ ಅಭಿನಂದಿಸಿದೆ.

Post a Comment

0 Comments