ಪೆರ್ಲ : ಎಣ್ಮಕಜೆ ಪಂಚಾಯತಿನ ಸಾರ್ವಜನಿಕ ಸೊತ್ತುಗಳ ಸಾಗಾಟದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಿಪಿಐಎಂ ಹಾಗೂ ಡಿವೈಎಫ್ ಐ ನೇತೃತ್ವದಲ್ಲಿ ನಡೆಸಿದ ಪಂ.ಕಚೇರಿ ಮುತ್ತಿಗೆಯಲ್ಲಿ ಡಿಫಿ ಸಿಪಿಐಎಂ ನೇತಾರರ ಮೇಲೆ ಕೇಸು ದಾಖಲಿಸಲಾಗಿದೆ.ವಿಶ್ವರಾಜ್,ರಾಮಕೃಷ್ಣ ರೈ ಕುದ್ವ,ಪುಷ್ಪಾ ,ಮನೋಜ್ ಶೇಣಿ,ನಾಸಿರುದ್ಧಿನ್ ಮಲಂಗರ,ಮೊಹಮ್ಮದ್ ಹನೀಫ್ ನೇತೃತ್ವದಲ್ಲಿ ಸುಮಾರು 15 ಜನ ಸಿಪಿಎಂ ಕಾರ್ಯಕರ್ತರು ಮಾರ್ಚ್ 23ರಂದು ಬೆಳಿಗ್ಗೆ 10.30 ರಿಂದ 11.40 ರ ವರೆಗೆ ಮೆರವಣಿಗೆಯಲ್ಲಿ ಬಂದು ಪಂಚಾಯತ್ ಮುಖ್ಯ ದ್ವಾರದ ಮುಂಭಾಗದ ರಸ್ತೆಯಲ್ಲಿ ಕುಳಿತುಕೊಂಡು ಘೋಷಣೆಗಳನ್ನು ಕೂಗಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಅಡ್ಡಿಪಡಿಸಿ ಕಾನೂನು ಪ್ರಕಾರ ತೆರಳುವಂತೆ ಹೇಳಿದರೂ ತಿರುಗಿ ನೋಡದೆ ಘೋಷಣೆ ಕೂಗಿದ್ದಾರೆ ಎಂದು ಪೋಲಿಸರು ದಾಖಲಿಸಿದ ಕೇಸಿನಲ್ಲಿ ತಿಳಿಸಲಾಗಿದೆ.

0 Comments