Ticker

6/recent/ticker-posts

Ad Code

ಕೊಡ್ಯಮೆ ಅಂತಲ ಶ್ರೀಧರ್ಮ ಚಾವಡಿಯ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ನೀರ್ಚಾಲು : ಇತಿಹಾಸ ಪ್ರಸಿದ್ಧ ಕುಂಬಳೆ ಸೀಮೆಯ ಕೊಡ್ಯಮೆ ಅಂತಲ  ಶ್ರೀಧರ್ಮ ಚಾವಡಿಯ ಧರ್ಮ ದೈವಗಳ ವಾರ್ಷಿಕ ನೇಮೋತ್ಸವ ಮೇ 2ರಿಂದ 5ರ ತನಕ ಜರಗಲಿದೆ. ಇದರ ಆಮಂತ್ರಣಾ ಪತ್ರಿಕೆಯನ್ನು  ಬಾಯಾರು ಓಂಶ್ರೀ ಶಕ್ತಿಪೀಠ ಬೊಳ್ಳಿಮಲೆ ಇಲ್ಲಿನ ಧರ್ಮದರ್ಶಿ ಶಾರದ ತನಯ ಬಾಯಾರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು  ಸಮುದಾಯವು ಅಚಲ ದೈವ ಭಕ್ತಿ ಆರಾಧನೆಗೆ ಮೂಲ ಸ್ವರೂಪರಾಗಿದ್ದು ಪಾರಂಪಾರಿಕ ದೈವಿಕ ಶಕ್ತಿಗಳ ಆರಾಧನೆ ನಾಡಿಗೆ ಕ್ಷೇಮವನ್ನುಂಟು ಮಾಡಲಿ ಎಂದು ಹಾರೈಸಿದರು.ಕೊಡ್ಯಮೆ ಅಂತಲ  ಶ್ರೀ ಧರ್ಮ ಚಾವಡಿಯ ಸೇವಾ ಸಮಿತಿ ಹಾಗೂ ಆಡಳಿತ ಸಮಿತಿ ಪದಾಧಿಕಾರಿಗಳು,ಆಶಾ ಶಾರದ ತನ‌ಯ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments