Ticker

6/recent/ticker-posts

Ad Code

ಕರ್ನಾಟಕದಿಂದ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 285.12 ಲೀಟರ್ ಮದ್ಯ ವಶ : ಪರಾರಿಯಾದ ಚಾಲಕಗಾಗಿ ತೀವ್ರ ಶೋಧ


ಕುಂಬಳೆ: ಕರ್ನಾಟಕದಿಂದ ಹುಂಡೈ ಐ20 ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 285.12 ಲೀಟರ್ ಮದ್ಯವನ್ನು ಅಬಕಾರಿ ವಿಶೇಷ ದಳ ವಶಪಡಿಸಿಕೊಂಡಿದೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಕಾರಿನ ಆರ್‌ಸಿ ಮಾಲೀಕರ ವಿರುದ್ಧ ಅಬಕಾರಿ ಇಲಾಖೆ ತನಿಖೆ ಆರಂಭಿಸಿದೆ. ಕಾರು ಸಂಖ್ಯೆ ಕೆಎಲ್ 43ಡಿ, 0011 ಅನ್ನು ವಶಕ್ಕೆ ಪಡೆಯಲಾಗಿದೆ. ಕಾರು ಮಂಗಳೂರಿನಿಂದ ಬರುತ್ತಿದ್ದು  ಮೊಗ್ರಾಲ್‌ಪುತ್ತೂರಿನಲ್ಲಿ ತಪಾಸಣೆಯ ವೇಳೆ ಕಾರಿನಲ್ಲಿ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ಪತ್ತೆಯಾಗಿದೆ. ಪರಾರಿಯಾದ ಚಾಲಕನಿಗಾಗಿ ಶೋಧ ತೀವ್ರಗೊಂಡಿದೆ. ಕಾರ್ಯಾಚರಣೆಯ  ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಅಧಿಕಾರಿಗಳಾದ ರಂಜಿತ್ ಕೆ.ವಿ, ರಮೇಶ ಆರ್, ಸಿವಿಲ್ ಅಬಕಾರಿ ಅಧಿಕಾರಿಗಳಾದ ಅತುಲ್ ಟಿ.ವಿ, ಶೈಲೇಶ್ ಕುಮಾರ್ ಪಿ, ರಾಜೇಶ್ ಪಿ, ಮಂಜುನಾಥನ್ ವಿ, ಮೋಹನ್ ಕುಮಾರ್ ಎಲ್, ಚಾಲಕರಾದ ಕ್ರಿಸ್ಟಿನ್ ಪಿ.ಎ, ಮಹೇಶ್ ಪಿ.ವಿ.ಪಾಲ್ಗೊಂಡಿದ್ದರು.

Post a Comment

0 Comments