ಬಂದ್ಯೋಡು : ಕುಡಾಲು ಕನಕಪ್ಪಾಡಿ ತರವಾಡು ಮನೆ ಹಾಗೂ ದೈವಚಾವಡಿಯ ಕೋಡಿಂಗಾರು ಶಾಖೆಯ ವತಿಯಿಂದ ಧೂಮಾವತಿ ಮತ್ತು ಪರಿವಾರ ದೈವಗಳ ಹರಕೆಯ ನೇಮೋತ್ಸವವು ಭಕ್ತಿ ಸಂಭ್ರಮದಿಂದ ಸಮಾಪ್ತಿಗೊಂಡಿತು. ತರವಾಡಿನ ಕುಟುಂಬಸ್ಥರ ಧರ್ಮ ದೈವ ಧೂಮಾವತಿ ದೈವದ ನೇಮ, ಪ್ರಸಾದ ವಿತರಣೆ ನಂತರ ಅನ್ನದಾನ, ಸಂಜೆ ಗುಳಿಗ ದೈವದ ಕೋಲ, ಬಳಿಕ ಭಂಡಾರ ಇಳಿಯುವುದರೊಂದಿಗೆ ನೇಮೋತ್ಸವ ಸಮಾಪ್ತಿಗೊಂಡಿತು.

0 Comments