Ticker

6/recent/ticker-posts

Ad Code

ಕಾಸರಗೋಡು ಗೋ - ಕುಟೀರಕ್ಕೆ ಶುದ್ಧ ದೇಶೀಯ ತಳಿ ಮತ್ತು ಗಿಡ್ಡ ತಳಿಯ ಗೋವುಗಳನ್ನು ಉದಾರವಾಗಿ ನೀಡಲು ಕರೆ

 

ಕಾಸರಗೋಡು : ಗೋ - ಭಕ್ತರು, ಗೋ - ಪೋಷಕರ ಪ್ರೋತ್ಸಾಹ, ಸಹಕಾರದೊಂದಿಗೆ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿರುವ ಕಾಸರಗೋಡು ಗೋ-ಕುಟೀರದ ಪ್ರವೇಶೋತ್ಸವದ ಮುಂಚಿತವಾಗಿ ಶ್ರದ್ಧಾ  ಭಕ್ತಿಯಿಂದ ಗೋ - ದಾನಿಗಳು ಶುದ್ಧ ದೇಶೀಯ ತಳಿ ಮತ್ತು ಗಿಡ್ಡ ತಳಿಯ ಗೋವು(ಹಾಲು ಕರೆಯುವ ದನ-ಕರು ಅಥವಾ ಹೆಣ್ಣು ಕರು)ಗಳನ್ನು ಉದಾರವಾಗಿ ದಾನ ರೂಪದಲ್ಲೂ ಅಥವಾ ಗೋವುಗಳನ್ನು ಪೋಷಿಸಲು ಪ್ರಾಯೋಜಕತ್ವ ವಹಿಸಿ, ಅಂತಹ ಗೋವುಗಳನ್ನು ಕಾಸರಗೋಡು ಗೋ-ಕುಟೀರಕ್ಕೆ ಗೋ-ದಾನ ನೀಡಲು ಅಹ್ವಾನ ನೀಡಲಾಗಿದೆ.

ಕಾಸರಗೋಡು ಗಿಡ್ಡ ತಳಿ, ಮಲೆನಾಡು ಗಿಡ್ಡ ತಳಿ, ಶುದ್ಧ ದೇಶೀಯ ತಳಿಯ ಗೋವುಗಳನ್ನು ಉಳಿಸಿ, ಬೆಳೆಸುವುದಕ್ಕಾಗಿ, ಕಾಸರಗೋಡು ಕನ್ನಡ ಗ್ರಾಮದಲ್ಲಿ ಕಾಸರಗೋಡು ಗೋ-ಕುಟೀರವನ್ನು ಸ್ಥಾಪಿಸಲಾಗಿದೆ.

ಕಾಸರಗೋಡು ಪ್ರದೇಶದಲ್ಲಿ ಗೋವುಗಳನ್ನು ಗೋ -ಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿರುವ ನೂರಾರು ಗೋ-ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ಸಾರ್ವಜನಿಕರು ಹಾಗೂ ಗೋ - ಪೋಷಕರ ಸಹಕಾರ, ಪ್ರೋತ್ಸಾಹ, ಪ್ರಾಯೋಜಕತ್ವದಡಿಯಲ್ಲಿ ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಸರಗೋಡು ಗೋ -ಕುಟೀರದ ನಿರ್ಮಾಣ ಕಾಮಗಾರಿಯು ಭರದಿಂದ ನಡೆಯುತ್ತಿದೆ.

ಸಮಾಜದ ಬಂಧುಗಳು, ಕುಟುಂಬಸ್ಥರು ಹಾಗೂ ದೇವಸ್ಥಾನಗಳು, ಕ್ಷೇತ್ರಗಳು, ಮಠ, ಮಂದಿರ, ದೈವಸ್ಥಾನಗಳಲ್ಲಿ ವವರ್ಷಂಪ್ರತಿ ನಡೆಯುವ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ, ಪುನರ್ ಪ್ರತಿಷ್ಠಾ ಅಷ್ಟಬಂಧ, ಬ್ರಹ್ಮ ಕಲಶೋತ್ಸವ ವಿವಿಧ ಧಾರ್ಮಿಕ ಉತ್ಸವಗಳು ಹಾಗೂ ಸಮಾಜ ಬಾಂಧವರ ಗೃಹ ಪ್ರವೇಶೋತ್ಸವ, ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಗೋವುಗಳ ಪ್ರವೇಶೋತ್ಸವದ ಮೂಲಕ  ಆರಾಧಿಸುವುದಕ್ಕಾಗಿ ಗೋವುಗಳನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ. ಧಾರ್ಮಿಕ ಪೂಜಾ ಕಾರ್ಯಗಳಿಗೆ ಗೋ-ಮೂತ್ರ- ಪಂಚಗವ್ಯ ಮತ್ತು ಗೋ- ಸಗಣಿ- ಗೋ- ಮಯವನ್ನು ಅವಶ್ಯಕತೆ ಇರುವವರಿಗೆ ದಿನನಿತ್ಯ ನಿರಂತರವಾಗಿ ದೊರಕುವಂತೆ ಮಾಡಲು ಸಿದ್ಧತೆ ಮಾಡಲಾಗುತ್ತದೆ. ಕಾಸರಗೋಡು ಗೋ - ಕುಟೀರದ ಗೋವುಗಳನ್ನು ದತ್ತು ಪಡೆದು ಒಂದು ವರ್ಷ ಕಾಲ ಗೋಗ್ರಾಸ ಗೋ - ಆಹಾರವನ್ನು ನೀಡಿ ಪೋಷಿಸಲು, ಗೋ- ಭಕ್ತರಿಗೆ ಗೋ -ಸೇವೆ ಮಾಡಲು ಅವಕಾಶ ನೀಡಲಾಗುವುದು ಎಂದು ಇದರ ರೂವಾರಿ  ಶಿವರಾಮ ಕಾಸರಗೋಡು ತಿಳಿಸಿದರು‌.

Post a Comment

0 Comments