ಕಾಸರಗೋಡು : ಕಸಾಯಿಖಾನೆಗೆ ತಂದಿದ್ದ ಎಮ್ಮೆಗಳನ್ನು ಕದ್ದು ಸಾಗಿಸುತ್ತಿದ್ದ ಅಂತಾರಾಜ್ಯ ಕಳ್ಳರ ತಂಡದ ಇಬ್ಬರು ಆರೋಪಿಗಳು ಪೋಲಿಸ್ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಣ್ಣೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಎಮ್ಮೆ ಕಳ್ಳತನದ ಘಟನೆಗಳು ಹೆಚ್ಚುತ್ತಿತ್ತು. ತಳಿಪರಂಬ ಪ್ರದೇಶದಲ್ಲೂ ಇದೇ ರೀತಿಯ ಕಳ್ಳತನಗಳು ವರದಿಯಾಗಿವೆ. ಇದರ ಹಿಂದೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್‌ಗಳ ಕೈವಾಡವಿದೆ ಎಂಬ ಸುಳಿವು ದೊರೆತ ಹಿನ್ನಲೆಯಲ್ಲಿ ಪೊಲೀಸರು ಹಾಸನಕ್ಕೆ ತಲುಪಿ ತನಿಖೆ ನಡೆಸಿದ್ದರು. ಇದರಂತೆ ಕರ್ನಾಟಕದ ಹಾಸನ ಮೂಲದ ಅಸ್ಗರ್ ಹುಸೇನ್ (36) ಮತ್ತು ಇಮ್ರಾನ್ ಅಲಿ (34) ಅವರನ್ನು ಪಯ್ಯಾವೂರು ಇನ್ಸ್‌ಪೆಕ್ಟರ್ ಟಿಂಕ್ವಿಲ್ ಶಶಿಯವರ ನೇತೃತ್ವದ ತಂಡ ಬಂಧಿಸಿದೆ. ಪಯ್ಯಾವೂರು ಚಾಚಮ್ಮ ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 'ಡೈಲಿ ಫ್ರೆಶ್' ಎಂಬ ಸಂಸ್ಥೆಯಿಂದ ಎಮ್ಮೆಯನ್ನು ಕದ್ದ ಪ್ರಕರಣದಲ್ಲಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

0 Comments