ಕಾಸರಗೋಡು : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.8ರಂದು ಬೇಕಲ ಕೋಟೆಗೆ ಭೇಟಿ ನೀಡುವ ಮಹಿಳೆಯರು, ತರುಣಿಯರು, ಬಾಲಕಿಯರು ಸೇರಿದಂತೆ ಎಲ್ಲಾ ಸ್ತ್ರೀಯರಿಗೆ ಬೇಕಲ ಬೀಚ್‌ಗೆ ಪ್ರವೇಶ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಟಿಕೆಟ್ ರಿಯಾಯಿತಿಗಳ ಜೊತೆಗೆ ಆ ದಿನದಂದು ಬೀಚ್, ಪಾರ್ಕ್‌ಗೆ ಭೇಟಿ ನೀಡುವವರಿಗೆ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಎಂದು ಬಿಆರ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಶಿಜಿನ್ ಮತ್ತು ಪಾರ್ಕ್ ಆಪರೇಟರ್ ಬೇಕಲ್ ಬೀಚ್ ಟೂರಿಸಂ ಪ್ರಮೋಷನ್ ಐಎನ್‌ಸಿ ಎಂಡಿ ಕೆ.ಕೆ.ಅಬ್ದುಲ್ ಲತೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 Comments