ಪೆರ್ಲ: ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ, ಐಸಿಎಆರ್ - ಸಿಪಿಸಿಆರ್ ಐ ಕಾಸರಗೋಡು ಹಾಗೂ ಪೆರ್ಲ ಕೃಷಿ ಭವನದ ಆಶ್ರಯದಲ್ಲಿ ಕಾಟುಕುಕ್ಕೆ ಕೊಲ್ಯದ ಸದಾಶಿವ ನಾಯ್ಕ್ ಅವರ ಮನೆ ಪರಿಸರದಲ್ಲಿ ಪ್ರಾಕೃತಿಕ ಕೃಷಿ ಅಧ್ಯಯನದ ಭಾಗವಾಗಿ ಅಗ್ನಿ ಅಸ್ತ್ರ, ನೀಮ್ ಅಸ್ತ್ರದ ತಯಾರಿ ಹಾಗೂ ಬಳಕೆಯ ಪ್ರಾತ್ಯಕ್ಷಿಕೆ ನೀಡಲಾಯಿತು.
ಕೆವಿಕೆ ವಿಜ್ಞಾನಿ ಡಾ.ಸರಿತಾ ಹೆಗ್ಗಡೆ ಮತ್ತು ಡಾ.ದಿನೇಶ್ ಕುಮಾರ್ ಯಾದವ್ ಮತ್ತು ಕೆವಿಕೆ ಮಾಸ್ಟರ್ ಟ್ರೈನರ್, ಸಾವಯವ ಕೃಷಿಕ ಶಿವ ಪ್ರಸಾದ್ ಹೊಸಮನೆ ನೀರ್ಚಾಲು, ನೈಸರ್ಗಿಕ ಕೀಟ ನಿಯಂತ್ರಣಕ್ಕಾಗಿ ಅಗ್ನಿ ಅಸ್ತ್ರ, ನೀಮ್ ಅಸ್ತ್ರದ ತಯಾರಿ ಹಾಗೂ ಬಳಸುವ ವಿಧಾನದ ಕುರಿತು ಮಾಹಿತಿ ನೀಡಿದರು. ಪೆರ್ಲ ಕೃಷಿ ಭವನದ ಕೃಷಿ ಅಧಿಕಾರಿ ನಿತಿನ್ ಬಿ.ಕೆ, ಕೃಷಿ ಸಹಾಯಕ ಸುರೇಶ್ ಉಪಸ್ಥಿತರಿದ್ದರು. ಸ್ಥಳೀಯ ಕೃಷಿಕರು ಭಾಗವಹಿಸಿದ್ದರು.

.jpeg)
0 Comments